Lifestyle

ಕೋಮಲವಾದ ಪಾದಗಳಿಗಾಗಿ ಹೀಗೆ ಮಾಡಿ ನೋಡಿ-ಬೆಸ್ಟ್‌ ರಿಸಲ್ಟ್‌ ಪಡೆಯಿರಿ

ಆರೈಕೆ ಮಾಡಿದ್ರೆ ದೇಹದ ಅಂಗಾಂಗಳು  ಸ್ವಚ್ಛವಾಗಿರುತ್ತವೆ ಮತ್ತು ಆಕರ್ಷಕವಾಗಿರುತ್ತವೆ. ಅದರಲ್ಲೂ ಮುಖ್ಯವಾಗಿ ನಮ್ಮ ಪಾದಗಳ ಅಡಿಭಾಗವು ಕೊಳಕು ಮತ್ತು ಜಿಡ್ಡಿನಿಂದ ಕೂಡಿರುತ್ತದೆ. ಮಳೆಗಾಲ ಮತ್ತು ಚಳಿಗಾಲದಲ್ಲಿ ಪಾದಗಳ ಆರೈಕೆಯತ್ತ ಗಮನಹರಿಸುವ ಅಗತ್ಯ ಹೆಚ್ಚಾಗಿದೆ. ಮಹಿಳೆಯರಿಗೆ ಮನೆಕೆಲಸ ಮತ್ತು ನೀರಿನಲ್ಲಿ ಅಲೆದಾಡುವುದರಿಂದ  ಪಾದದಲ್ಲಿ ಹೆಚ್ಚು ಬಿರುಕುಗಳು ಉಂಟಾಗುತ್ತವೆ. ಇದು ಅಸಮರ್ಪಕ ರಕ್ತ ಪರಿಚಲನೆ ಕೂಡ ಕಾರಣವಾಗಬಹುದು. ಕೊಳಕು ಹಾಗೂ ಸತ್ತ ಜೀವಕೋಶಗಳು ಪಾದಗಳ ಹಿಂಭಾಗದಲ್ಲಿ ಸ್ಥಾನ ಪಡೆಯುತ್ತವೆ.

ಹಾಗಾಗಿ ರಾತ್ರಿ ಮಲಗುವ ಮುನ್ನ, ನಿಮ್ಮ ಪಾದಗಳನ್ನು ಸ್ವಚ್ಛವಾಗಿಡಲು ಮಾಯಿಶ್ಚರೈಸರ್ ಕ್ರೀಮ್‌ಗಳನ್ನು ಹಚ್ಚಿ. ವ್ಯಾಸಲಿನ್‌ ಅಲ್ಲಿ ನಿಂಬೆ ರಸವನ್ನು ಸೇರಿಸಿ ಪಾದಗಳಿಗೆ ಹಚ್ಚಿದರೆ ಉತ್ತಮ ಫಲಿತಾಂಶ ಸಿಗುತ್ತದೆ. ಪ್ರತಿದಿನ ನಿಮ್ಮ ಪಾದಗಳನ್ನು ಉಗುರು ಬೆಚ್ಚಗಿನ ನೀರಿನಿಂದ ತೊಳೆಯಿರಿ. ಎತ್ತರದ ಹಿಮ್ಮಡಿಯ ಪಾದರಕ್ಷೆಗಳನ್ನು ಬಳಸುವ ಅಭ್ಯಾಸವಿರುವವರು ಅವುಗಳನ್ನು ಹೆಚ್ಚಾಗಿ ಬಳಸಬೇಡಿ.  ಮಳೆಗಾಲದಲ್ಲಿ ಪಾದ ನೆನೆಯುವುದರಿಂದ ಇನ್ಪೆಕ್ಷನ್‌ನಿಂದಾಗಿ ತುರಿಕೆ ಉಂಟಾಗಬಹುದು. ಆಗ ಈರುಳ್ಳಿ ತಿರುಳನ್ನು ಹಚ್ಚುವುದರಿಂದ ತ್ವರಿತ ಪರಿಹಾರ ಸಿಗುತ್ತದೆ.

ಒಂದು ಬಟ್ಟಲಿನಲ್ಲಿ ಅರ್ಧ ಚಮಚ ಅರಿಶಿನ, ಅರ್ಧ ಕಪ್ ಹಸಿ ತೆಂಗಿನ ತುರಿ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ ಪಾದಗಳಿಗೆ ಮಸಾಜ್ ಮಾಡಿ. ಅರ್ಧ ಗಂಟೆಯ ನಂತರ ಉಗುರುಬೆಚ್ಚನೆಯ ನೀರಿನಿಂದ ತೊಳೆದುಕೊಳ್ಳಿ ಪಾದಗಳು ಮೃದುವಾಗುತ್ತದೆ. ತೆಂಗಿನೆಣ್ಣೆಯಿಂದ ಪಾದಗಳನ್ನು ಆಗಾಗ್ಗೆ ಮಸಾಜ್ ಮಾಡುವುದರಿಂದ ಪಾದದ ಅಡಿಭಾಗವು ಮೃದುವಾಗುತ್ತದೆ.  ಕಡಲೆಹಿಟ್ಟು, ಹುಳಿಯಾಗಿರುವ ಮೊಸರು ಮತ್ತು ಅರಿಶಿನವನ್ನು ಬೆರೆಸಿ ಪಾದಗಳಿಗೆ ಹಚ್ಚಿ. ಆರಿದ ನಂತರ ಗಟ್ಟಿಯಾಗಿ ಉಜ್ಜಿದರೆ ಸತ್ತ ಜೀವಕೋಶಗಳು ನಿವಾರಣೆಯಾಗುತ್ತವೆ.

Share Post