ಗೋವಾದಲ್ಲಿ ಮಹಿಳೆ ಕೊಲೆ; ಕರ್ನಾಟಕದ ಹುಸೇನ್ ಅರೆಸ್ಟ್
ಪಣಜಿ; ಗೋವಾದಲ್ಲಿ ಮಹಿಳೆಯೊಬ್ಬರನ್ನು ರಾಡ್‌ನಿಂದ ಹಲ್ಲೆ ಮಾಡಿ ಕೊಲೆ ಮಾಡಲಾಗಿದೆ. ಈ ಪ್ರಕರಣ ಸಂಬಂಧ ಕರ್ನಾಟಕ ಮೂಲದ ವ್ಯಕ್ತಿಯೊಬ್ಬನನ್ನು ಗೋವಾ ಪೊಲೀಶರು ಬಂಧಿಸಿದ್ದಾರೆ. ನಲವತ್ತು ವರತ್ಷದ ಹುಸೇನ್ ಖಾನ್ ಎಂಬಾತನೇ ಕೊಲೆ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ.
ಮೇ 6ರಂದು ದಕ್ಷಿಣ ಗೋವಾದ ಸಾನ್ವೊರ್‌ದಿಮ್ ಗ್ರಾಮದ ನಿರ್ಜನ ಪ್ರದೇಶವೊಂದರಲ್ಲಿ ರೂಪಾ ಪಾರ್ಕರ್ ಎಂಬುವವರ ಕೊಲೆಯಾಗಿತ್ತು. ತೀವ್ರ ರಕ್ತಸ್ರಾವದಿಂದಾಗಿ ಆಕೆ ಸಾವನ್ನಪ್ಪಿದ್ದಳು. ಕೊಲೆಯ ಬೆನ್ನುಹತ್ತಿದ ಪೊಲೀಸರಿಗೆ ಹುಸೇಣ್ ಖಾನ್ ಸಿಕ್ಕಿಬಿದ್ದಿದ್ದಾರೆ. ಅಂದು ರೂಪಾ ಪಾರ್ಕರ್ ಬಸ್‌ಗಾಗಿ ಕಾಯುತ್ತಿದ್ದರು. ಈ ವೇಳೆ ಕಾರು ಚಾಲಕನಾಗಿದ್ದ ಹುಸೇನ್ ಖಾನ್, ಡ್ರಾಪ್ ನೀಡುತ್ತೇನೆಂದು ಆ ಮಹಿಳೆಗೆ ನಂಬಿಸಿದ್ದಾನೆ. ಆದ್ರೆ ಆತ ರೂಪಾ ಪಾರ್ಕರ್‌ಳನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ರಾಡ್‌ನಿಂದ ಹಲ್ಲೆ ಮಾಡಿ ಕೊಲೆ ಮಾಡಿದ್ದಾನೆ. ನಂತರ ಆಕೆಯ ಮೈಮೇಲಿದ್ದ ಆಭರಣಗಳನ್ನು ದೋಚಿಸಿದ್ದಾರೆ.
ಆರೋಪಿ ಹುಸೇನ್ ಖಾನ್ ಸಾಕಷ್ಟು ಸಾಲ ಮಾಡಿಕೊಂಡಿದ್ದ. ಈ ಕಾರಣಕ್ಕಾಗಿ ಆತ ಈ ಕೃತ್ಯ ಎಸಗಿದ್ದಾನೆ ಎಂದು ತಿಳಿದುಬಂದಿದೆ. ಆರೋಪಿ ಮಹಿಳೆಯಿಂದ ಕದ್ದ ಚಿನ್ನಾಭರಣವನ್ನು ಮಾರಾಟ ಮಾಡಿ ತನ್ನ ಸಾಲ ತೀರಿಸಿದ್ದನಂತೆ. ಉಳಿದ ಹಣದಲ್ಲಿ ದ್ವಿಚಕ್ರ ವಾಹನವೊಂದನ್ನು ಖರೀದಿಸಿದ್ದ ಎಂದು ತಿಳಿದುಬಂದಿದೆ.