ನಿಮ್ಮ ಮದುವೆಯಲ್ಲಿ ಛಾಯಾಗ್ರಾಹಕ ಮಿಸ್ ಮಾಡಿರುವ ಫೋಟೋ ಇದೆ-ಐಎಎಸ್ ಅಧಿಕಾರಿಯ ಸಮಾಜ ಮುಖಿ ಸಂದೇಶ
ಮದುವೆ ಸಮಾರಂಭಗಳಲ್ಲಿ ಆಹಾರವನ್ನ ಬಿಸಾಡೋದು ಸರ್ವೆ ಸಾಮಾನ್ಯವಾಗಿದೆ. ಪ್ರತಿನಿತ್ಯ ಶೇಕಡಾ 40ರಷ್ಟು ಆಹಾರ ವ್ಯರ್ಥವಾಗುತ್ತಿದೆ ಎಂದು ಸರ್ವೆ ಮಾಡಲಾಗಿದೆ. ಮತ್ತೊಂದೆಡೆ, ವಿಶ್ವದ ಜನಸಂಖ್ಯೆಯ ಪ್ರತಿಶತ 10 ರಷ್ಟು ಜನ ಹಸಿವಿನಿಂದ ಬಳಲುತ್ತಿದ್ದಾರೆ. ಒಂದೆಡೆ ವೇಸ್ಟ್… ಇನ್ನೊಂದೆಡೆ ಒಂದು ತುತ್ತಿಗೂ ಪರದಾಡುವ ದುಸ್ಥಿತಿ ಎದುರಾಗಿದೆ. ಆಹಾರ ವೇಸ್ಟ್ ಮಾಡುವುದರಿಂದ ಮುಂದೊಂದು ದಿನ ಆಹಾರ ಭದ್ರತೆಯ ಅಪಾಯವನ್ನು ತಂದೊಡ್ಡುತ್ತದೆ ಎನ್ನಲಾಗಿದೆ. ಇರುವವರು ಬಿಸಾಡುವುದು ಇಲ್ಲದವರು ಅನ್ನಕ್ಕಾಗಿ ಸಾಯುವುದು ಕ್ರಮೇಣವಾಗಿ ನಡೆದುಕೊಂಡು ಬಂದಿದೆ. ಇದಕೆಕ ಬ್ರೇಕ್ ಹಾಕಲು ಪ್ರತಿಯೊಬ್ಬ ಮನುಷ್ಯ ಜವಾಬ್ದಾರಿಯಿಂದ ನಡೆದುಕೊಳ್ಳಬೇಕಿದೆ.
ಆಹಾರ ವೃಸ್ಟ್ ಬಹುತೇಕ ನಡೆಯುವುದ ಮದುವೆ, ಮುಂಜಿ, ಸಾಋವಜನಿಕ ಕಾರ್ಯಕ್ರಮಗಳು, ಇತರೆ ಫಂಕ್ಷನ್‌ಗಳಲ್ಲಿ ಹೆಚ್ಚಾಗಿ ನಡೆಯುತ್ತಿದೆ. ನಮ್ಮ ಜನಕ್ಕೆ ಕಣ್ಣಿಗೆ ಬೇಕು..ಹೊಟ್ಟೆಗೆ ಬೇಡ ಎನ್ನುವಂತೆ ಇರುತ್ತದೆ. ಕಂಡ ಕಂಡದ್ದನ್ನೆಲ್ಲಾ ಹೆಚ್ಚಾಗಿ ತಟ್ಟೆಗೆ ಬಡಿಸಿಕೊಂಡು ಅದನ್ನು ತಿನ್ನದೆ ಆಚೆ ಎಸೆಯುವುದು. ಇದು ಅತ್ಯಂತ ದಾರುಣ ವಿಚಾರ. ಎಸೆಯುವ ಅನ್ನದಲ್ಲಿ ಮತ್ತೊಬ್ಬರ ಹಸಿವು, ಕಷ್ಟ ಇರುತ್ತದೆ ಯಾವೊಬ್ಬರೂ ಅರ್ಥ ಮಾಡಿಕೊಳ್ಳವುದಿಲ್ಲ. ಒಟ್ಟು ಕಂಡಿದ್ದೆಲ್ಲವನ್ನೂ ನಾಲಿಗೆಗೆ ರುಚಿ ತೋರಿಸಿ ಎಸೆಯುವುದು ಫ್ಯಾಷನ್ ಆಗ್ಬಿಟ್ಟಿದೆ.
ಇದು ಕೇವಲ ಮದುವೆಯ ಬಗ್ಗೆ ಅಲ್ಲ.. ಪ್ರತಿ ಔತಣಕೂಟಕ್ಕೂ ಸಂಬಂಧಿಸಿದೆ. ಆಹಾರವನ್ನು ವ್ಯರ್ಥ ಮಾಡಬಾರದು ಎಂಬುದು ಮನದಲ್ಲಿದ್ದರೂ ಮಾಡುವ ಕೆಲಸವನ್ನೇ ಮಾಡ್ತಾರೆ. ಬೇಯಿಸಿದ ಅರ್ಧ ಆಹಾರ ನೆಲ ಪಾಲಾಗುತ್ತಿರುವುದರಲ್ಲಿ ಸಂದೇಹವೇ ಇಲ್ಲ.
ಈ ಬಗ್ಗೆ ಒಬ್ಬ ಐಎಎಸ್ ಅಧಿಕಾರಿ ಒಂದು ಮದುವೆಯಲ್ಲಿ ಆಹಾರ ಎಸೆದ ಫೋಟೊ ತೆಗೆದು ಶೇರ್ ಮಾಡಿ ಒಂದು ಅದ್ಭತ ಕ್ಯಾಪ್ಷನ್ ನೀಡಿದ್ದಾರೆ. ʻನಿಮ್ಮ ಮದುವೆಯಲ್ಲಿ ಫೋಟೋಗ್ರಾಫರ್ ಮಿಸ್ ಮಾಡಿರುವ ಫೋಟೋ ಇದು. “ಆಹಾರ ವ್ಯರ್ಥ ಮಾಡುವುದನ್ನು ನಿಲ್ಲಿಸಿ” ಎಂದು ಶೀರ್ಷಿಕೆ ನೀಡಿ, ಆಹಾರ ನೆಲದ ಪಾಲಾಗುತ್ತಿರುವ ಬಗ್ಗೆ ಮನದಟ್ಟು ಮಾಡಿಸಿದ್ದಾರೆ. ನೀವು ತಿನ್ನದಿದ್ದರೆ ಬೇಡ ಆದರೆ ಅದನ್ನು ವ್ಯರ್ಥ ಮಾಡಬೇಡಿ ಊಟವಿಲ್ಲದೆ ಅನೇಕ ಜನ ಉಸಿರು ಚೆಲ್ಲುತ್ತಿದ್ದಾರೆ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಬೇಕಿದೆ.
The photo that your wedding photographer missed.
Stop wasting FOOD. pic.twitter.com/kKx9Mxadpp
— Awanish Sharan (@AwanishSharan) February 18, 2022