National

ತಿಮ್ಮಪ್ಪನ ದೇಗುಲಕ್ಕೆ 9.2ಕೋಟಿ ಆಸ್ತಿ ದಾನ ಮಾಡಿದ ಮಹಿಳೆ

ತಿರುಪತಿ : ಮಹಿಳೆಯೊಬ್ಬರು ತಿರುಪತಿ ತಿಮ್ಮಪ್ಪನ ದೇಗುಲಕ್ಕೆ 9.2 ಕೋಟಿ ರೂ ಮೌಲ್ಯದ ಆಸ್ತಿ ಮತ್ತು ನಗದನ್ನು ದಾನ ಮಾಡಿದ್ದಾರೆ.

ಚೆನೈ ಮೂಲದ 76ವರ್ಷ ವಯಸ್ಸಿನ ಮಹಿಳೆಯೊಬ್ಬರು ಇತ್ತೀಚೆಗೆ ನಿಧನರಾದ ತಮ್ಮ ಸಹೋದರಿ ಪಾರ್ವತಮ್ಮನವರ ಪರವಾಗಿ ಗುರುವಾರ ಬೆಳಗ್ಗೆ ತಿರುಪತಿ ಆಡಳಿತ ಮಂಡಳಿಯ ಅಧ್ಯಕ್ಷ ವೈ.ವಿ ಸುಬ್ಬಾರೆಡ್ಡಿ ಅವರಿಗೆ 3.2ಕೋಟಿಯ ಡಿಮ್ಯಾಂಡ್‌ ಡ್ರಾಫ್ಟ್‌ನೊಂದಿಗೆ 6 ಕೋಟಿ ಮೌಲ್ಯದ ಸ್ಥಿರ ಆಸ್ತಿಯ ದಾಖಲೆಗಳನ್ನು ಹಸ್ತಾಂತರಿಸಿದ್ದಾರೆ. ಪಾರ್ವತಮ್ಮನವರು ಅವಿವಾಹಿತೆಯಾಗಿದ್ದರು.

ಟಿಟಿಡಿ ಅವರು ನಿರ್ಮಿಸುತ್ತಿರುವ ಮಕ್ಕಳ ಸೂಪರ್‌ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ 3.2ಕೋಟಿ ನಗದು ಬಳಸಿಕೊಳ್ಳುವಂತೆ ಮನವಿ ಮಾಡಿಕೊಂಡಿದ್ದಾರೆ.

Share Post