ಕಾಂಗ್ರೆಸ್ ಅಹೋರಾತ್ರಿ ಧರಣಿ – ಬಿ.ಎಸ್.ವೈ ಸಂಧಾನಕ್ಕೂ ಒಪ್ಪದ ಕೈ ನಾಯಕರು
ಬೆಂಗಳೂರು : ಈಶ್ವರಪ್ಪ ರಾಜೀನಾಮೆಗೆ ಒತ್ತಾಯಿಸಿ ಕಾಂಗ್ರೆಸ್ ವಿಧಾನಸಭೆ ಹಾಗೂ ವಿಧಾನ ಪರಿಷತ್‌ನಲ್ಲಿ ಅಹೋರಾತ್ರಿ ಧರಣಿ ನಡೆಸುತ್ತಿದೆ. ಕಾಂಗ್ರೆಸ್ ತೀವ್ರವಾದ ಪ್ರತಿಭಟನೆಗೆ ಮುಂದಾಗಿದ್ದು ಬಿಜೆಪಿ ನಾಯಕರು ಸಂಧಾನಿಸಲು ಪ್ರಯತ್ನಿಸಿದರೂ ಅದು ವಿಫಲಗೊಂಡಿದೆ.
ಕಾಂಗ್ರೆಸ್ ನಾಯಕರಿಗೆ ಬೆಡ್, ತಲೆ ದಿಂಬುಗಳನ್ನು ವ್ಯವಸ್ಥೆ ಮಾಡಲಾಗಿತ್ತು. ಸ್ಪೀಕರ್ ಸೂಚನೆ ಮೇರೆಗೆ ಧರಣಿ ನಿರತ ಕಾಂಗ್ರೆಸ್ ನಾಯಕರಿಗೆ ಭೋಜನ ವ್ಯವಸ್ಥೆ ಮಾಡಲಾಗಿತ್ತು. ಭೋಜನ ಸವಿದ ಕೈ ನಾಯಕರು ವಿಧಾನಸಭೆಯಲ್ಲಿಯೇ ವಿರಮಿಸಿದ್ದಾರೆ. ಯು ಟಿ ಖಾದರ್ ಅವರು ಟಿ ಶರ್ಟ್ ಟ್ರ್ಯಾಕ್ ಧರಿಸಿ ಧರಣಿಯಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು.
ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಮತ್ತು ಸಿಎಂ ಯಡಿಯೂರಪ್ಪ ಸಂಧಾನ ಮಾಡಲು ಯತ್ನಿಸಿದರೂ ಅದು ವಿಫಲವಾಗಿದೆ. ಕೆ ಎಸ್ ಈಶ್ವರಪ್ಪ ಅವರು ರಾಜೀನಾಮೆ ಕೊಡುವವರೆಗೂ ಧರಣಿ ಮುಂದುವರೆಸುವೆವು ಎಂದು ಸಿದ್ಧರಾಮಯ್ಯ ಹೇಳಿದ್ದಾರೆ.