ಡಿಕೆಶಿ ನೀವು ಕೊತ್ವಾಲ್ ಶಿಷ್ಯ – ಬಿಜೆಪಿ ಟ್ವೀಟ್ ವಾರ್
ಬೆಂಗಳೂರು : ಹಿಜಾಬ್ ಸಂಬಂಧಿಸಿದಂತೆ ಕೆ ಎಸ್ ಈಶ್ವರಪ್ಪ ಅವರು ಹೇಳಿದ್ದ ಹೇಳಿಕೆ ಒಂದು ಸಾಕಷ್ಟು ಗೊಂದಲಗಳಿಗೆ ಕಾರಣವಾಗಿದೆ. ಕೆಂಪು ಕೋಟೆ ಮೇಲೆ ಕೇಸರಿ ಧ್ವಜ ಹಾರಿಸುವುದಾಗಿ ಕೆ ಎಸ್ ಈಶ್ವರಪ್ಪ ಹೇಳಿಕೆ ನೀಡಿದ್ದರು. ವಿಧಾನಮಂಡಲದಲ್ಲಿ ಈ ಕುರಿತು ಚರ್ಚೆ ಶುರು ಆಗಿದೆ. ನಂತರ ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರು ವಾಗ್ವಾದಕ್ಕೆ ಇಳಿದಿದ್ದಾರೆ .
ಡಿಕೆಶಿ ಅವರು ಕೈ ತೋರಿಸಿಕೊಂಡು ಈಶ್ವರಪ್ಪನವರಿಗೆ ಮಾತನಾಡಿದ್ದಾರೆ. ಕೆಲವು ನಿಮಿಷಗಳು ಸದನದಲ್ಲಿ ಗೊಂದಲದ ವಾತಾವರ್ಣ ಸೃಷ್ಠಿಯಾಗಿತ್ತು. ಈ ಕುರಿತು ಬಿಜೆಪಿ ಟ್ವೀಟ್ ಮಾಡಿದೆ.
ಡಿ ಕೆ ಶಿವಕುಮಾರ್ ಅವರೇ ನೀವು ಕೊತ್ವಾಲ್ ಶಿಷ್ಯ ಎಂದ ಮಾತ್ರಕ್ಕೆ ಸದನದಲ್ಲಿಯೂ ಅದೇ ಶೈಲಿಯಲ್ಲಿ ವರ್ತಿಸುವುದು ತರವೇ ಎಂದು ಪ್ರಶ್ನೆ ಮಾಡಿದೆ.
ಟ್ವೀಟ್‌ನಲ್ಲಿ ಏನಿದೆ
ಡಿ.ಕೆ.ಶಿವಕುಮಾರ್ ಅವರೇ ನೀವು ಕೊತ್ವಾಲ್ ಶಿಷ್ಯ ಎಂಬ ಮಾತ್ರಕ್ಕೆ ಸದನದಲ್ಲೂ ಅದೇ ಶೈಲಿಯಲ್ಲಿ ವರ್ತಿಸುವುದು ತರವೇ?
ಒಬ್ಬ ಸಚಿವರ ವಿರುದ್ಧ ಕೈ ಮಿಲಾಯಿಸುವ ವರ್ತನೆ ತೋರಿದ್ದರಿಂದ ಇಂದು ಸದನದಲ್ಲಿ ಕೋಲಾಹಲ ನಿರ್ಮಾಣವಾಗಿದೆ. ವಿಧಾನಸಭೆಯ ಮಹತ್ವ ನಿಮಗೆ ತಿಳಿದಿದೆಯೇ?#ಕಾಂಗ್ರೆಸ್ಗೂಂಡಾಗಿರಿ
— BJP Karnataka (@BJP4Karnataka) February 16, 2022
ರಾಷ್ಟ್ರ ಧ್ವಜದ ಬಗ್ಗೆ ಕಾಂಗ್ರೆಸ್ ಪಕ್ಷ ನಡೆಸುತ್ತಿರುವ ಪ್ರಹಸನವನ್ನು ನೋಡಿದಾಗ ಇದೊಂದು ವ್ಯವಸ್ಥಿತ ಷಡ್ಯಂತ್ರ ಎಂದೇ ಭಾಸವಾಗುತ್ತದೆ.
ಸಚಿವರ ಹೇಳಿಕೆಯ ಆಯ್ದ ಭಾಗವನ್ನಷ್ಟೇ ಇಟ್ಟುಕೊಂಡು ನಿಲುವಳಿ ಸೂಚನೆಗೆ ಆಗ್ರಹಿಸುತ್ತಿರುವುದು ಸಂಸದೀಯ ನಡಾವಳಿಯಲ್ಲ.#ಕಾಂಗ್ರೆಸ್ಗೂಂಡಾಗಿರಿ
— BJP Karnataka (@BJP4Karnataka) February 16, 2022
ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಅವರೇ,
ಸದನದಲ್ಲಿ ಸಚಿವ ಈಶ್ವರಪ್ಪ ಅವರು ಹೇಳಿದ ಮಾತಿನಲ್ಲಿ ತಪ್ಪೇನಿದೆ?
ನೀವು ಜಾಮೀನಿನ ಮೇಲೆ ಜೈಲಿನಿಂದ ಹೊರಗಿರುವುದು ಸುಳ್ಳೇ?
ಜಾಮೀನು ವಜಾಗೊಂಡರೆ ನೀವು ಮತ್ತೆ ಜೈಲಿಗೆ ಹೋಗುವುದು ನಿಜವಲ್ಲವೇ?
ಸತ್ಯ ಹೇಳಿದರೆ ಕೆಂಡದಂಥ ಕೋಪವೇಕೆ?#ಕಾಂಗ್ರೆಸ್ಗೂಂಡಾಗಿರಿ
— BJP Karnataka (@BJP4Karnataka) February 16, 2022