Bengaluru

ಸದನದಲ್ಲಿ ರಾಷ್ಟ್ರಧ್ವಜ ಹಿಡಿದು ಪ್ರತಿಭಟನೆ ಮಾಡಿದ್ದಾರೆ, ಇದು ಅಕ್ಷಮ್ಯ ಅಪರಾಧ-ಈಶ್ವರಪ್ಪ

ಬೆಂಗಳೂರು: ಹಿಜಾಬ್‌ ವಿಚಾರದಲ್ಲಿ ವಿದ್ಯಾರ್ಥಿಗಳನ್ನು ಬೇರೆ ಮಾಡಿ ಅದನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಂಡಿರುವುದು ಅಸಹ್ಯನೀಯ ಸಂಗತಿ ಎಂದು ಈಶ್ವರಪ್ಪ ಕಿಡಿಕಾರಿದ್ದಾರೆ.  ಶಿವಮೊಗ್ಗದಲ್ಲಿ ಕೇಸರಿ ಧ್ವಜ ಹಾರಿಸಿದ್ದಾರೆಂದು ಡಿಕೆಶಿ ಹೇಳಿ ಸುಳ್ಳು ಸುದ್ದಿ ಮಾಡಿದ್ದು ಮೊದಲನೇ ಅಂಶ, ಎರಡನೆಯದು ಕೇಸರಿ ಶಾಲು ಎಲ್ಲಿಂದ ಹೇಗೆ ಬಂದಿದೆ ಎಂಬುದು ನನಗೆ ಗೊತ್ತು ಎಂದಿದ್ದಾರೆ. ಇಷ್ಟು ವರ್ಷಗಳಲ್ಲಿ ನೀತಿ, ನಿಯಮಗಳನ್ನು ಮೀರಿ ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿದ್ದು ಕಾಂಗ್ರೆಸ್‌ನವರು. ಅವರು ನೀಡಿದ ಹೇಳಿಕೆ ಕೋಮು ಗಲಭೆಗೆ ಕಾರಣವಾಗಿದ್ದಾರೆ. ಇಂದು ರಾಷ್ಟ್ರಧ್ವಜ ಹಿಡಿದು ದೇಶದ್ರೋಹಿಗಳು ಎಂಬುದನ್ನು ಸಾಬೀತು ಮಾಡಿದ್ದಾರೆ. ವೀರಶೈವ ಲಿಂಗಾಯತ ಒಡೆದು ಕಾಂಗ್ರೆಸ್‌ ಅಧಿಕಾರ ಕಳೆದುಕೊಂಡಿದೆ. ಈಗ ಹಿಜಾಬ್‌ ವಿಚಾರದಲ್ಲಿ ಕಾಂಗ್ರೆಸ್‌ ಬೇಳೆ ಬೇಯಿಸಿಕೊಳ್ಳುತ್ತಿದೆ. ಇವರಿಗೆ ಜನ ಬುದ್ದಿ ಕಲಿಸುತ್ತಾರೆ.
ಭಗವಾದ್‌ ಧ್ವಜ ನೂರು, ಇನ್ನೂರು, ಐನೂರು ವರ್ಷಕ್ಕೆ ಕೆಂಪು ಕೋಟೆ ಮೇಲೆ ಹಾರಬಹುದು ಎಂದು ನಾನು ಹೇಳಿದ್ದೆ. ಅದನ್ನು ದುರುಪಯೋಗ ಪಡಿಸಿ ಜನಹಿತ ವಿಚಾರ ಮಾಡುವ ಬದಲು, ದುರುದ್ದೇಶದಿಂದ ರಾಷ್ಟ್ರಧ್ವಜದ ಬಗ್ಗೆ ಮಾತನಾಡಿದ್ದಾರೆ. ಈ ಬಗ್ಗೆ ಸಿಎಂ ಹಾಗೂ ಗೃಹ ಮಂತ್ರಿಗಳೊಂದಿಗೆ ಮಾತನಾಡುತ್ತೇನೆ. ಸದನದಲ್ಲಿ ರಾಷ್ಟ್ರಧ್ವಜ ಹಿಡಿದು ಅಪಮಾನ ಮಾಡಿದ್ದಾರೆ. ಡಿಕೆಶಿ ಮೇಲೆ ದೆಶದ್ರೋಹಿ ಕೇಸ್‌ ಹಾಕಿ ಅವರನ್ನು ಬಂಧಿಸುವಂತೆ ನಾನು ಸಿಎಂ ಅವರಲ್ಲಿ ಮನವಿ ಮಾಡ್ತೇನೆ.
ನಾನು ತಪ್ಪು ಮಾಡಿದ್ರೆ ನಾನು ಹೇಳಿದ್ದಕ್ಕೆ ಸಾಕ್ಷಿ ನೀಡಿದ್ರೆ ಇಂದೇ ರಾಜೀನಾಮೆ ನೀಡುತ್ತೇನೆ. ಲಾಲ್‌ಚೌಕ್‌ನಲ್ಲಿ ಪಾಕಿಸ್ತಾನದ ಧ್ವಜ ಹಾರಿದಾಗ ನರೇಂದ್ರ ಮೋದಿಯವರು ಕೇಸರಿ ವಾಹಿನಿ ಶ್ರೀನಗರಕ್ಕೆ ಹೊರಟು ಬನ್ನಿನ ಎಂದಾಗ ಯುವಕರನ್ನು ಕರೆದೊಯ್ದಿದ್ದು ನಾನು. ಕಾಂಗ್ರೆಸ್‌ನವರು ಹೇಡಿಗಳ ಹಾಗೆ ಬಚ್ಚಿಟ್ಟುಕೊಂಡ್ರು. ಉಗ್ರಗಾಮಿಗಳು ನಮಗೆ ಸವಾಲೆಸೆದಿದ್ರು. ತಾಲಿ ಮೊಲೆ ಹಾಲು ಕುಡಿದಿದ್ರೆ ಪಾಕ್‌ ಧ್ವಜ ಇಳಿಸಿ ನಿಮ್ಮ ಧ್ವಜ ಹಾರಿಸಿದ್ರೆ ಹತ್ತು ಲಕ್ಷ ಬಹುಮಾನ ಘೋಷಣೆ ಮಾಡಿದ್ರು. ಕಾಂಗ್ರೆಸ್‌ನವರು ಬರಲಿಲ್ಲ. ಹೋಗಿದ್ದು ನಾವು ಮೋದಿ, ಯಡಿಯೂರಪ್ಪನವರ ದಂಡು ತ್ರಿರಂಗ ಧ್ವಜ ಹಾರಿಸಿದ್ದು. ಉಗ್ರಗಾಮಿಗಳ ಸವಾಲು ಸ್ವೀಕರಸಲು ಹೆದರಿ ಬಚ್ಚಿಟ್ಟುಕೊಂಡವರು ಇಂದು ಧ್ವಜದ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಈಶ್ವರಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Share Post