Crime

ಸಿಡಿ ಪ್ರಕರಣ; ರಮೇಶ್‌ ಜಾರಕಿಹೊಳಿಗೆ ಕ್ಲೀನ್‌ಚಿಟ್‌..!

ಬೆಂಗಳೂರು: ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ಸಿಡಿ ಪ್ರಕರಣ ಸಂಬಂಧ ತನಿಖೆ ನಡೆಸುತ್ತಿದ್ದ ಎಸ್‌ಐಟಿ ವಿಶೇಷ ತನಿಖಾ ತಂಡ, ಬೆಳಗಾವಿ ಸಾಹುಕಾರ್‌ಗೆ ಕ್ಲೀನ್‌ ಚಿಟ್‌ ನೀಡಿದೆ. ಎಸ್‌ಐಟಿ ಇಂದು ಕೋರ್ಟ್‌ಗೆ ಅಂತಿಮ ವರದಿಯನ್ನು ಸಲ್ಲಿಸಿದ್ದು, ರಮೇಶ್‌ ಜಾರಕಿಹೊಳಿ ವಿರುದ್ಧ ಯಾವುದೇ ಸಾಕ್ಷ್ಯಾಧಾರಗಳಿಲ್ಲ ಎಂದು ಬಿ ರಿಪೋರ್ಟ್‌ ಸಲ್ಲಿಸಿದೆ ಎಂದು ತಿಳಿದುಬಂದಿದೆ.

ನಿನ್ನೆಯಷ್ಟೇ ಹೈಕೋರ್ಟ್‌ ಪ್ರಕರಣದ ಅಂತಿಮ ವರದಿ ಸಲ್ಲಿಸಲು ಎಸ್‌ಐಟಿಗೆ ಅನುಮತಿ ನೀಡಿತ್ತು. ಈ ಹಿನ್ನೆಲೆಯಲ್ಲಿ ಎಸ್‌ಐಟಿ ವಿಶೇಷ ತನಿಖಾ ತಂಡ ತಮ್ಮ ಅಂತಿಮ ವರದಿಯನ್ನು ಅಂದರೆ ಬಿ ರಿಪೋರ್ಟ್‌ನ್ನು ಬೆಂಗಳೂರಿನ ಒಂದನೇ ಎಸಿಎಂಎಂ ಕೋರ್ಟ್‌ಗೆ ಸಲ್ಲಿಸಲಾಗಿದೆ. ಇದರಿಂದಾಗಿ ರಮೇಶ್‌ ಜಾರಕಿಹೊಳಿಗೆ ಈ ಪ್ರಕರಣದಲ್ಲಿ ಬಿಗ್‌ ರಿಲೀಫ್‌ ಸಿಗುವ ಸಾಧ್ಯತೆ ಇದೆ.

ಸಿಡಿ ಪ್ರಕರಣ ಸಂತ್ರಸ್ತ ಯುವತಿ ಪ್ರಕರಣದ ತನಿಖೆಗೆ ಎಸ್‌ಐಟಿಗೆ ಕೊಟ್ಟಿದ್ದೇ ತಪ್ಪು. ಅದರ ವರದಿ ಮಾನ್ಯ ಮಾಡದಂತೆ ಮನವಿ ಮಾಡಿದ್ದರು. ಆದ್ರೆ ಹೈಕೋರ್ಟ್‌ ಅಂತಿಮ ವರದಿಗೆ ಅನುಮತಿ ನೀಡಿತ್ತು. ಇದೀಗ ಸಂತ್ರಸ್ತೆ ಮರ ವಕೀಲರು ಯಾವ ರೀತಿಯ ಕಾನೂನು ಹೋರಾಟ ನಡೆಸುತ್ತಾರೆ ಎಂಬುದರ ಮೇಲೆ ಪ್ರಕರಣ ಭವಿಷ್ಯ ನಿಂತಿದೆ.

 

Share Post