ತಾರಕಕ್ಕೇರಿದ ಹಿಜಾಬ್/ಕೇಸರಿ ಶಾಲು ವಾರ್: ಖಾಕಿಯೊಂದಿಗೆ ಪೋಷಕರ ವಾಗ್ವಾದ
ಉಡುಪಿ: ಕರಾವಳಿಯಲ್ಲಿ ಸಮವಸ್ತ್ರ ಗಲಾಟೆ ತಾರಕಕ್ಕೇರಿದೆ, ನಾವ್ ಕಾಲೇಜಿಗೆ ಬರೋದೇ ಹೀಗೆ ಎಂದು ವಾಗ್ವಾದ ಶುರುವಾಗಿದೆ, ನಿನ್ನೆ ಆರು ಮಂದಿ ವಿದ್ಯಾರ್ಥಿಗಳು, ಇಂದು ಇಪ್ಪತ್ತು ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಕಾಲೇಜಿಗೆ ಬಂದಿದ್ದಾರೆ. ಇಸ್ಲಾಂ ವಿದ್ಯಾರ್ಥಿನಿಯರಿಗೆ ಅವರ ಪೋಷಕರು ಸಾಥ್ ನೀಡಿದ್ದಾರೆ.
ಕಾಲೇಜಿನ ಬಳಿ ಪೊಲೀಸರೊಂದಿಗೆ ಹೆತ್ತವರು ಮಾತಿನ ಚಕಮಕಿ ನಡೆಸಿದ್ದಾರೆ. ನಮ್ಮ ಮಕ್ಕಳನ್ನು ಗೇಟ್‌ನಲ್ಲೇ ತಡೆದಿದ್ದು ಯಾಕೆ ಪ್ರಶ್ನಿಸಿದ್ದಾರೆ. ಕುಂದಾಪುರ ಸರ್ಕಲ್ ಇನ್ಸ್‌ಪೆಕ್ಟರ್ ಜೊತೆ ಹೆತ್ತವರು ವಾಗ್ವಾದಕ್ಕಿಳಿದಿದ್ದಾರೆ. ನಮ್ಮ ಮಕ್ಕಳನ್ನು ಕಾಲೇಜು ಒಳಗೆ ಬಿಡಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ, ಹೆತ್ತವರ ಮನವೊಲಿಕೆಗೆ ಪ್ರಾಂಶುಪಾಲರು ಹಾಗೂ ಉಪನ್ಯಾಸಕರಿಂದ ಶತಪ್ರಯತ್ನ ನಡೆಸಿದ್ರು. ಯಾವುದೇ ಬಗ್ಗದಿದ್ದಕ್ಕೆ ಸರ್ಕಲ್ ಇನ್ಸ್‌ಪೆಕ್ಟರ್ ಖಡಕ್ ಸೂಚನೆ ನೀಡಿದ್ದಾರೆ. ಪ್ರತಿಭಟನೆ ನಡೆಸಿದ್ರೆ ಎಫ್‌ಐಆರ್ ದಾಖಲು ಮಾಡುವುದಾಗಿ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.
ಇನ್ನೂ ಈ ಬಗ್ಗೆ ವಿದ್ಯಾರ್ಥಿನಿಯರು ವಿರೋಧ ವ್ಯಕ್ತಪಡಿಸಿದ್ದಾರೆ. ಎರಡು ವರ್ಷಗಳಿಂದ ಹಿಜಾಬ್ ಧರಿಸಿ ಬರುತ್ತಿದ್ದೇವೆ ಆಗ ಇಲ್ಲದ ನಿಯಮಗಳು ಈಗ್ಯಾಕೆ ಎಂದು ಪ್ರಶ್ನಿಸಿದ್ದಾರೆ. ಆಗೆಲ್ಲ ಇಲ್ಲದ ರೂಲ್ಸ್ ಇದ್ದಕ್ಕಿದ್ದಂತೆ ಹೀಗೆ ಹೇಳಿದ್ರೆ ಏನು ಮಾಡುವುದು. ಹಿಜಾಬ್ ಇಲ್ಲದೆ ನಾವು ಇರಲ್ಲ, ಹಿಜಾಬ್ ಧರಿಸಿಯೇ ಕಾಲೇಜಿಗೆ ಬರುತ್ತೇವೆ. ನಿನ್ನೆಯಿಂದ ನಮ್ಮನ್ನು ಬಿಸಲಿನಲ್ಲಿ ನಿಲ್ಲುವಂತೆ ಮಾಡಿದ್ದಾರೆ.
ಹಲವು ವಿದ್ಯಾರ್ಥಿನಿಯರಿಗೆ ತಲೆಸುತ್ತಿ ಬಂದಿದೆ. ಇವರ ನಿಯಮಗಳಿಂದ ನಮ್ಮ ವಿದ್ಯಾಭ್ಯಾಸ ಹಾಳಾಗುತ್ತಿದೆ. ಕೇಳಿದ್ರೆ ನಮಗೆ ಮೇಲಿಂದ ಆರ್ಡರ್ ಬಂದಿದೆ ಹಾಗಾಗಿ ನಾವು ಪಾಲನೆ ಮಾಡ್ತಿದ್ದೇವೆ ಅಂತಾರೆ. ಇದರಿಂದ ಹಾಳಾಗ್ತಿರೋದು ನಮ್ಮ ಜೀವನ ಎಂದು ವಿದ್ಯಾರ್ಥಿನಿಯರು ಅಳಲು ತೋಡಿಕೊಂಡಿದ್ದಾರೆ. ಇತ್ತ ಉಡುಪಿಯ ಬೈಂದೂರಿನಲ್ಲಿ ವಿದ್ಯಾರ್ಥಿಗಳು ಹಿಜಾಬ್ ವಿರುದ್ಧ ಕೇಸರಿ ಶಾಲು ಧರಿಸಿ ವಿದ್ಯಾರ್ಥಿಗಳು