ಸಂಜಯ್ ರಾವುತ್ ಮನೆಗೆ ಉದ್ಧವ್ ಠಾಕ್ರೆ ಭೇಟಿ; ಕುಟುಂಬದವರಿಗೆ ಧೈರ್ಯ ತುಂಬಿದ ಮಾಜಿ ಸಿಎಂ
ಮುಂಬೈ; ಭೂಗಹರಣ ಸಂಬಂಧ ಶಿವಸೇನೆ ಮುಖಂಡ ಸಂಜಯ್ ರಾವುತ್ ಅವರನ್ನು ನಿನ್ನೆ ರಾತ್ರಿ ಇಡಿ ಅಧಿಕಾರಿಗಳು ಬಂಧಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸಂಜಯ್ ರಾವುತ್ ಅವರ ನಿವಾಸಕ್ಕೆ ಶಿವಸೇನಾ ಮುಖ್ಯಸ್ಥ ಹಾಗೂ ಮಾಜಿ ಸಿಎಂ ಉದ್ಧವ್ ಠಾಕ್ರೆ ಭೇಟಿ ನೀಡಿದ್ದರು. ಆಪ್ತರಾದ ಸಂಜಯ್ ರಾವುತ್ ಅವರ ಕುಟುಂಬಸ್ಥರನ್ನು ಭೇಟಿಯಾದ ಉದ್ಧವ್ ಠಾಕ್ರೆ ಅವರು ಅವರಿಗೆ ಧೈರ್ಯ ತುಂಬಿದರು.
ಸಂಜಯ್ ರಾವುತ್ ಕುಟುಂಬದವರ ಜೊತೆ ಅರ್ಧ ಗಂಟೆಗೂ ಹೆಚ್ಚು ಕಾಲ ಮಾತುಕತೆ ನಡೆಸಿದ ಉದ್ಧವ್ ಠಾಕ್ರೆ, ರಾತ್ರಿ ನಡೆದ ಘಟನೆ ಬಗ್ಗೆ ಮಾಹಿತಿ ಪಡೆದುಕೊಂಡರು. ನಂತರ ಪ್ರಕರಣದಲ್ಲಿ ಸಂಜಯ್ ರಾವುತ್ ನಿರ್ದೋಷಿಯಾಗಿ ಬರುತ್ತಾರೆ ಎಂದು ಅವರ ಕುಟುಂಬಸ್ಥರಿಗೆ ಧೈರ್ಯ ಹೇಳಿದರು.