Cinema

ಧೋನಿ , ವಿಕ್ರಮ್‌ ಫೋಟೋ ವೈರಲ್‌

ಚೆನೈ : ಐಪಿಎಲ್‌ ಮೆಗಾ ಹರಾಜಿನ ಕಾರಣ ಈಗಾಗಲೇ ಚೆನೈಗೆ ಬಂದಿರುವ ಮಹೇಂದ್ರ ಸಿಂಗ್‌ ಧೋನಿ ಅವರು ಸಿ.ಎಸ್.ಕೆ ಮ್ಯಾನೇಜ್ಮೆಂಟ್ ತಂಡದ‌ ಜೊತೆ ಕಾಲ ಕಳೆಯುತ್ತಿದ್ದಾರೆ. ಈ ನಡುವೆ ಧೋನಿ ಮತ್ತು ವಿಕ್ರಮ್‌ ಅವರು ಇರುವ ಫೋಟೋ ಒಂದು ವೈರಲ್‌ ಆಗ್ತಿದೆ.

ಈ ಫೋಟೊವನ್ನು ಚೆನೈ ಸೂಪರ್‌ ಕಿಂಗ್ಸ್‌ನ ಅಧಿಕೃತ ಫ್ಯಾನ್‌ ಪೇಜ್‌ನಲ್ಲಿ ಪೋಸ್ಟ್‌ ಮಾಡಲಾಗಿದೆ. ವಿಕ್ರಮ್‌ ಅವರು ಕೂಡ ಧೋನಿಯ ಅಭಿಮಾನಿಯಾಗಿದ್ದಾರೆ. ವಿಕ್ರಮ್‌ ಅವರ ಮಹಾನ್‌ ಚಿತ್ರದ ಟೀಸರ್‌ ಬಿಡುಗಡೆಯ ಸಂದರ್ಭದಲ್ಲಿ ಧೋನಿ ಅವರನ್ನು  ಭೇಟಿಯಾಗಿದ್ದಾರೆ ಎನ್ನಲಾಗ್ತಿದೆ.

ಐಪಿಎಲ್ 2022 ರ ಮೆಗಾ ಹರಾಜಿಗೆ ತಯಾರಿ ನಡೆಸಲು ಧೋನಿ ಚೆನೈನಲ್ಲಿ ಉಳಿದುಕೊಂಡಿದ್ದಾರೆ. ಇದೇ ಫೆಬ್ರುವರಿ 12 ಮತ್ತು 13ರಂದು ಬೆಂಗಳೂರಿನಲ್ಲಿ  ಮೆಗಾ ಆಕ್ಷನ್‌ ನಡೆಯಲಿದೆ.

 

Share Post