ಷೇರುಪೇಟೆ ಚೇತರಿಕೆ : ಸೆನ್ಸೆಕ್ಸ್ 848 ಅಂಕ ಹೆಚ್ಚಳ
ಬೆಂಗಳೂರು : ಕೇಂದ್ರ ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ ಅವರು ಇಂದು ಕೇಂದ್ರ ಬಜೆಟ್ ಮಂಡಿಸುವುದಕ್ಕೂ ಮುಂಚೆಯೇ ದೇಶದ ಷೇರುಪೇಟೆಯಲ್ಲಿ ಸಕಾರಾತ್ಮಕ ವಹಿವಾಟು ದಾಖಲಾಗಿತ್ತು. ದಿನದ ವಹಿವಾಟು ಅಂತ್ಯಕ್ಕೆ ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ 848.40 ಅಂಶ ಹೆಚ್ಚಳಗೊಂಡಿದೆ.
ಸೆನ್ಸೆಕ್ಸ್ ಶೇಕಡ 1.46ರಷ್ಟು ಹೆಚ್ಚಳವಾಗಿದೆ ೫೮,೮೬೨.೫೭ ಅಂಶ ತಲುಪಿದೆ. ರಾಷ್ಟ್ರೀಯ ಸಂವೇದಿ ಸೂಚ್ಯಂಕ ನಿಫ್ಟಿ 237 ಅಂಶ ಏರಿಕೆಯಾಗಿ 17,576.80 ಅಂಶಗಳಲ್ಲಿ ವಹಿವಾಟು ಕೊನೆಯಾಗಿದೆ.