Cinema

ಮೀಟೂ ಪ್ರಕರಣ : ಅರ್ಜುನ್‌ ಸರ್ಜಾಗೆ ಜಯ

ಬೆಂಗಳೂರು : 2018ರಲ್ಲಿ ಭಾರಿ ಸದ್ದು ಮಾಡಿದ್ದ ವಿಷಯ ಎಂದರೆ ಅದು ಮೀಟೂ. ವಿಸ್ಮಯ ಸಿನಿಮಾ ಸಮಯದಲ್ಲಿ ಅರ್ಜುನ್‌ ಸರ್ಜಾ ಅವರು ಅಸಭ್ಯವಾಗಿ ನಡೆದುಕೊಂಡರು ಎಂದು ಶೃತಿ ಹರಿಹರನ್‌ ಹಾಕಿದ್ದ ಆ ಒಂದು ಪೋಸ್ಟ್‌ ದೊಡ್ಡ ಮಟ್ಟದ ಸುದ್ದಿ ಆಗಿತ್ತು.

ಅರ್ಜುನ್‌ ಸರ್ಜಾ ಅವರು ಅಸಭ್ಯವಾಗಿ ನಡೆದುಕೊಂಡಿದ್ದಾರೆ ಮತ್ತು ಲೈಂಗಿಕ ಕಿರುಕುಳ ನೀಡಿದ್ದಾರೆ ಎಂಬ ಒಂದು ಹೇಳಿಕೆ ಇಡೀ ಸ್ಯಾಂಡಲ್‌ವುಡ್‌ನಲ್ಲಿಯೇ ಸಂಚಲನ ಸೃಷ್ಠಿ ಮಾಡಿತ್ತು. ವಿವಾದದ ಬೆಂಕಿ ಎಷ್ಟರ ಮಟ್ಟಿಗೆ ಹೊತ್ತಿಕೊಂಡಿತ್ತು ಎಂದರೆ ಶೃತಿ ಹರಿಹರನ್‌ ಅವರನ್ನು ಇಂಡಸ್ಟ್ರಿಯಿಂದ ದೂರ ಇಡುವುದರ ಮಟ್ಟಿಗೆ ವಿವಾದ ಹುಟ್ಟಿಕೊಂಡಿತ್ತು.

ಅಂಬರೀಷ್‌ ಅವರ ನೇತೃತ್ವದಲ್ಲಿ ರಾಜಿ ಸಂಧಾನದ ಪ್ರಯತ್ನ ನಡೆದರೂ ಅದು ಸಫಲವಾಗಿರಲಿಲ್ಲ.

ಕಬ್ಬನ್‌ ಪಾರ್ಕ್‌ ಪೊಲೀಸರು ಕೇಸ್‌ ದಾಖಲಿಸಿಕೊಂಡು ಮೂರು ವರ್ಷ ತಡಕಾಡಿದರೂ ಸರಿಯಾದ ಸಾಕ್ಷಿ ಆಧಾರಗಳು ಸಿಗಲಿಲ್ಲ. ಪೊಲೀಸರು ನ್ಯಾಯಾಲೈಕ್ಕೆ ಬಿ ರಿಪೋರ್ಟ್‌ ಸಲ್ಲಿಸಿದ್ದರು, ಶೃತಿ ಹರಿಹರನ್‌ ಅವರು ಆಕ್ಷೇಪಣೆ ಸಲ್ಲಿಸಿಲ್ಲ. ಅದರಿಂದ ಅರ್ಜುನ್‌ ಸರ್ಜಾ ಅವರಿಗೆ ಜಯ ಸಿಕ್ಕಿದೆ.

ಅರ್ಜುನ್‌ ಸರ್ಜಾ ಯಾವುದೇ ತಪ್ಪು ಮಾಡಿಲ್ಲ ಎಂದು ಸಾಬೀತಾಗಿದೆ. ಶೃತಿ ಹರಿಹರನ್‌ ಇದುವರೆಗೂ ಯಾವುದೇ ಪ್ರತಿಕ್ರಿಯೇ ನೀಡಿಲ್ಲ.

Share Post