National

ಕಡಲ ಭದ್ರತೆಗಾಗಿ (ALH) MKIII ಲೈಟ್ ಹೆಲಿಕಾಪ್ಟರ್‌ ಸೇರ್ಪಡೆ

ಪೋರ್ಟ್ ಬ್ಲೇರ್‌: ಕಡಲ ಭದ್ರತೆಗೆ ಉತ್ತೇಜನ ನೀಡುವ ಸಲುವಾಗಿ, ಸ್ವದೇಶಿ ನಿರ್ಮಿತ ಲೈಟ್ ಹೆಲಿಕಾಪ್ಟರ್ (ALH) MK III  ಇಂದು ಪೋರ್ಟ್ ಬ್ಲೇರ್‌ನಲ್ಲಿ ಕಮಾಂಡರ್-ಇನ್-ಚೀಫ್, ಅಂಡಮಾನ್ ಮತ್ತು ನಿಕೋಬಾರ್ ಕಮಾಂಡ್ (CINCAN) ಲೆಫ್ಟಿನೆಂಟ್ ಜನರಲ್ ಅಜಯ್ ಸಿಂಗ್ ಅವರು INS ಉತ್ಕ್ರೋಶ್‌ನಲ್ಲಿ ಔಪಚಾರಿಕವಾಗಿ ಸೇನೆಗೆ ಸೇರ್ಪಡೆಗೊಳಿಸಿದರು.

ALH MK III ವಿಮಾನವು ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್‌ನಿಂದ ತಯಾರಿಸಲ್ಪಟ್ಟಿದೆ ಮತ್ತು ಮಿಲಿಟರಿ ಕ್ಷೇತ್ರದಲ್ಲಿ ಅತ್ಯುನ್ನತ ಪ್ರಗತಿ ಸಾಧಿಸಲಿದೆ, ಜೊತೆಗೆ ಸ್ವಾವಲಂಬನೆ ಮೂಲಕ ಸರ್ಕಾರದ  ‘ಆತ್ಮನಿರ್ಭರ ಭಾರತ’ ದತ್ತ ದಿಟ್ಟ ಹೆಜ್ಜೆ ಇಡುತ್ತಿದೆ.

ಇಲ್ಲಿಯವರೆಗೆ 300 ಕ್ಕೂ ಹೆಚ್ಚು ವಿಮಾನಗಳನ್ನು ಹಿಂದೂಸ್ಥಾನ್‌ ಏರೋನಾಟಿಕ್‌ ಸಂಸ್ಥೆ ಹಸ್ತಾಂತರಿಸಿದೆ. ಭಾರತೀಯ ಸೇನೆ ಪಡೆಗಳು ರಕ್ಷಣೆಗಾಗಿ ಈ ಹೆಲಿಕಾಪ್ಟರ್‌ಗಳನ್ನು ಬಳಸುತ್ತಿದ್ದಾರೆ. ಅವುಗಳ ರೂಪಾಂತರವೇ  MK III ಇದು ಅತ್ಯಾಧುನಿಕ ಸಂವೇದಕಗಳು ಮತ್ತು ಶಸ್ತ್ರಾಸ್ತ್ರಗಳನ್ನು ಒಳಗೊಂಡಿದೆ. ಸಮುದ್ರ ತೀರದಲ್ಲಿ ಭಾರತದ ಪರಾಕ್ರಮನ್ನು ಬಿಂಬಿಸುವ ಸಾಮರ್ಥ್ಯವನ್ನು ಹೊಂದಿದೆ ಎನ್ನಲಾಗಿದೆ.

Share Post