ಹೈದರಾಬಾದ್‌ನಲ್ಲಿ ಸ್ಫೋಟಕ್ಕೆ ಸಂಚು ನಡೆಸಿದ್ದ ಉಗ್ರರು
ಹೈದರಾಬಾದ್; ತೆಲಂಗಾಣ ರಾಜಧಾನಿ ಹೈದರಾಬಾದ್‌ನಲ್ಲಿ ವಿಧ್ವಂಸಕ ಕೃತ್ಯ ನಡೆಸಲು ಪಾಕಿಸ್ತಾನದಲ್ಲಿ ಸಂಚು ನಡೆಸಲಾಗಿತ್ತು ಎಂಬ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ. ಗ್ರೆನೇಡ್ಗಳನ್ನು ಪಾಕಿಸ್ತಾನದಿಂದ ಕಾಶ್ಮೀರದೊಳಕ್ಕೆ ರಹಸ್ಯವಾಗಿ ಸಾಗಿಸಿ ಅಲ್ಲಿಂದ ಹೈದರಾಬಾದ್ಗೆ ಕಳುಹಿಸಲಾಗಿತ್ತು ಎಂದು ತನಿಖೆ ವೇಳೇ ಗೊತ್ತಾಗಿದೆ.
ಹೈದರಾಬಾದ್ನ ಮುಸಾರಾಂಭಾಗ್ ಪ್ರದೇಶದ ಅಬ್ದುಲ್ ಜಾಹೆದ್ ಎಂಬಾತ ಯುವಕರನ್ನು ಸೇರಿಸಿ ಅವರಿಗೆ ಹಣಕಾಸು ಸಹಾಯ ನೀಡುವುದಾಗಿ ಹೇಳಿ ಭಯೋತ್ಪಾದಕ ಕೃತ್ಯಗಳಿಗೆ ಪ್ರೇರೇಪಿಸುತ್ತಿದ್ದ. ಈ ದುಷ್ಕೃತ್ಯದ ಭಾಗವಾಗಿ ದಸರಾ ಹಬ್ಬದ ಸಮಯದಲ್ಲಿ ಬಾಂಬ್ ಬ್ಲಾಸ್ಟ್ ಮಾಡಲು ಸಂಚು ರೂಪಿಸಲಾಗಿತ್ತು ಎಂದು ತಿಳಿದು ಬಂದಿದೆ.
ಇತ್ತೀಚೆಗೆ ಕಾಶ್ಮೀರದಲ್ಲಿ ಸಿಆರ್‌ಪಿಎಫ್ ಪಡೆಗಳ ಮೇಲೆ ಉಗ್ರರು ನೀಲಿ ಗ್ರೆನೇಡ್‌ಗಳಿಂದ ದಾಳಿ ಮಾಡಿದ್ದರು. ಈ ಗ್ರೆನೇಡ್‌ಗಳು ಚೀನಾದಲ್ಲಿ ತಯಾರಾಗಿರುವುದು ಎಂದು ಪೊಲೀಸರು ಪತ್ತೆ ಮಾಡಿದ್ದಾರೆ. ಜಾಹೆದ್ ತಂಡದ ಬಳಿ ಪತ್ತೆಯಾದ ಗ್ರೆನೇಡ್‌ಗಳು ಕೂಡ ನೀಲಿ ಬಣ್ಣದ್ದಾಗಿರುವುದರಿಂದ, ಅವು ಚೀನಾದಲ್ಲಿ ತಯಾರಿಸಲ್ಪಟ್ಟಿವೆ ಎಂದು ಶಂಕಿಸಲಾಗಿದೆ.