National

ಒಡಿಸ್ಸಾ ಕಡಲತೀರದಲ್ಲಿ ಅರಳಿದ ಲತಾ ಮಂಗೇಶ್ಕರ್‌ ಮರಳಿನ ಶಿಲ್ಪಕಲೆ

ಒಡಿಸ್ಸಾ: ಗಾನ ಕೋಗಿಲೆ ಲತಾ ಮಂಗೇಶ್ಕರ್ ಅವರು ಭಾನುವಾರ ಬೆಳಗ್ಗೆ ಕೊನೆಯುಸಿರೆಳೆದ್ರು. ಅವರ ಅಂತ್ಯಕ್ರಿಯೆ ಭಾನುವಾರ ಸಂಜೆ ಮಹಾರಾಷ್ಟ್ರದ ಶಿವಾಜಿ ಪಾರ್ಕ್‌ನಲ್ಲಿ ಸರ್ಕಾರದ ವಿಧಿವಿಧಾನಗಳೊಂದಿಗೆ ಚಿತ್ರರಂಗ, ರಾಜಕೀಯದ ವಿವಿಧ ಕ್ಷೇತ್ರಗಳ ಗಣ್ಯರು, ಅಭಿಮಾನಿಗಳ ನಡುವೆ ನೆರವೇರಿತು. ಲತಾ ಮಂಗೇಶ್ಕರ್ ಸಾವು ಭಾರತೀಯ ಚಲನಚಿತ್ರ ಸಂಗೀತ ಕ್ಷೇತ್ರಕ್ಕೆ ದೊಡ್ಡ ಆಘಾತವಾಗಿದೆ. ಅನೇಕ ಸೆಲೆಬ್ರಿಟಿಗಳು ಆಕೆಗೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಅಭಿಮಾನಿಗಳು ಒಂದಲ್ಲ ಒಂದು ರೀತಿಯಲ್ಲಿ ಶ್ರದ್ಧಾಂಜಲಿ ಅರ್ಪಣೆ ಮಾಡ್ತಿದಾರೆ ಅದರಲ್ಲಿ ಪ್ರಮುಖ ಮರಳು ಶಿಲ್ಪಿಯೊಬ್ಬರು ಕಲಾಕೃತಿ ರಚಿಸಿ ಗೌರವ ಸೂಚಿಸಿದ್ದಾರೆ.

ದಿಗ್ಗಜ ಗಾಯಕಿ ಲತಾ ಮಂಗೇಶ್ಕರ್ ಅವರ ನಿಧನಕ್ಕೆ ಪ್ರಮುಖ ಶಿಲ್ಪಿ ಸುದರ್ಶನ್ ಪಟ್ನಾಯಕ್ ಅವರು ಮರಳಿನಲ್ಲಿ ಅವರ ಚಿತ್ರವನ್ನು ಬಿಡಿಸಿ ಗೌರವ ಸೂಚಿಸಿದ್ದಾರೆ.  ಒಡಿಸ್ಸಾದ ಪುರಿ ಬೀಚ್‌ನಲ್ಲಿ ಮರಳು ಶಿಲ್ಪಕಲೆಯನ್ನು ಬಿಡಿಸಿ “ಮೇರಿ ಆವಾಜ್ ಹೀ ಪೆಹಚಾನ್ ಹೈ” ಎಂಬ ಶೀರ್ಷಿಕೆ ನೀಡಿದ್ದಾರೆ.

ಗ್ರೇಟ್‌ ಟ್ರಿಬ್ಯೂಟ್‌ ಟು ಇಂಡಿಯನ್‌ ನೈಟಿಂಗೇಲ್ ಲತಾಮಂಗೇಶ್ಕರ್ ಎಂದು ಸಹ ಬರೆದಿದ್ದಾರೆ. ಸುದರ್ಶನ್ ಪಟ್ನಾಯಕ್ ಲತಾ ಮಂಗೇಶ್ಕರ್‌ ಅವರಿಗೆ ನಾನು ಸೂಚಿಸುವ ಗೌರವ ಸಮರ್ಪಣೆ ಎಂದು ಬರೆದುಕೊಂಡಿದ್ದಾರೆ. ಇದಕ್ಕೂ ಮುನ್ನ ಅವರು ಅನಾರೋಗ್ಯಕ್ಕೆ ಒಳಗಾದಾಗಲೂ ಶೀಘ್ರ ಗುಣಮುಖರಾಗಲೆಂದು ಮರಳು ಶಿಲ್ಪಕಲೆಯನ್ನು ಬಿಡಿಸಿದ್ದರು.

Share Post