ದೆಹಲಿ ಪರೇಡ್‌ನಲ್ಲಿ ರಫೇಲ್ ಮತ್ತು ಜಾಗ್ವಾರ್ ವಿಮಾನಗಳ ರಮಣೀಯ ನೋಟ
ದೆಹಲಿ: 73ನೇ ಗಣರಾಜ್ಯೋತ್ಸವ ದಿನವಾದ ಇಂದು ದೆಹಲಿ ರಾಜಪಥದಲ್ಲಿ ನಡೆಯುತ್ತಿರುವ ಪರೇಡ್ ಮೈನವೀರೇಳಿಸುವಂತಿದೆ. ನೀಲಿ ಮೇಘದಲ್ಲಿ ಹಕ್ಕಿಗಳಂತೆ ಹಾರಾಡುತ್ತಿರುವ ವಿಮಾನಗಳ ರಮಣೀಯ ನೋಡ ಕಣ್ಣು ಕುಕ್ಕುವಂತಿದೆ. ಪೈಲೆಟ್‌ಗಳ ಕ್ರಿಯಾಶೀಲತೆಗೆ ಜನ ತಲೆಬಾಗಿದ್ದಾರೆ. 17 ಜಾಗ್ವಾರ್ ವಿಮಾನಗಳು ಆಕಾಶದಲ್ಲಿ 75ನೇ ಸಂಖ್ಯೆಯ ತೋರುವಲ್ಲಿ ಯಶಸ್ವಿಯಾಗಿದೆ. ಅಮೃತ್ ರಚನೆಯನ್ನು ಒಳಗೊಂಡಿರುವ ಜಾಗ್ವಾರ್ ವಿಮಾನಗಳು 75ಸಂಖ್ಯೆಯ ಚಿತ್ರವನ್ನು ಬಿಡಿಸಿರುವುದನ್ನು ರಕ್ಷಣಾ ಇಲಾಖೆ ಚಿತ್ರೀಕರಿಸಿದೆ.
#WATCH Amrit formation comprising 17 Jaguar aircraft make a figure of 75 on #RepublicDay
(Source: Ministry of Defence) pic.twitter.com/caNQTnNHoK
— ANI (@ANI) January 26, 2022
ಒಂದು ರಫೇಲ್, ಎರಡು ಜಾಗ್ವಾರ್, ಎರಡು MiG-29 UPG, ಎರಡು Su-30 MI ವಿಮಾನಗಳ ಕಾಕ್‌ಪಿಟ್ ನೋಟ ಮನಸೂರೆಗೊಳಿಸಿದೆ. ‘ಬಾಜ್’ ರಚನೆಯ ಏಳು ವಿಮಾನಗಳು ಕಾಕ್‌ಪಿಟ್ ನೋಟವನ್ನು ಬಿಂಬಿಸಿದೆ. ಏಳು ವಿಮಾನಗಳು ‘ಆರೋಹೆಡ್’ ಆಂಗಲ್‌ನ 300m AOL ನಲ್ಲಿ ಹಾರಾಟ ನಡೆಸಿವೆ.
#WATCH Cockpit view of 'Baaz' formation comprising one Rafale, two Jaguar, two MiG-29 UPG, two Su-30 MI aircraft in seven aircraft 'Arrowhead' formation flying at 300m AOL#RepublicDayParade
(Source: Ministry of Defence) pic.twitter.com/1qNvM4Gpnw
— ANI (@ANI) January 26, 2022