Sports

ಕ್ರಿಕೆಟಿಗ ಜಾಂಟಿ ರೋಡ್ಸ್ ಗೆ ಪತ್ರ ಬರೆದ ಮೋದಿ

ನವದೆಹಲಿ : ದಕ್ಷಿಣ ಆಫ್ರಿಕಾದ ಕ್ರಿಕೆಟಿಗ ಜಾಂಟಿ ರೋಡ್ಸ್‌ ಅವರಿಗೆ ಭಾರತದ ಮೇಲಿರುವ ಪ್ರೀತಿ ನಮಗೆಲ್ಲರಿಗೂ ತಿಳಿದೇ ಇದೆ. ಪ್ರತಿ ವರ್ಷ ಐಪಿಎಲ್‌ಗೆ ಕುಟುಂಬ ಸಮೇತರಾಗಿ ಬರುವ ಜಾಂಟಿ ಎರಡು ತಿಂಗಳುಗಳ ಕಾಲ ಭಾರತದಲ್ಲಿಯೇ ಕಳೆಯುತ್ತಾರೆ. ಇನ್ನು ಜಾಂಟಿ ರೋಡ್ಸ್‌ ಅವರು ತಮ್ಮ ಮಗಳಿಗೆ ಇಂಡಿಯಾ ಎಂದು ಹೆಸರಿಟ್ಟಿರುವುದು ನಮಗೆಲ್ಲರಿಗೂ ತಿಳಿದಿರುವ ವಿಷಯವೇ.

ಭಾರತದಲ್ಲಿಯೂ ಸಾಕಷ್ಟು ಅಭಿಮಾನಿಗಳನ್ನು ಸಂಪಾದಿಸಿರುವ ಜಾಂಟಿ ರೋಡ್ಸ್‌ ಅವರಿಗೆ ನಮ್ಮ ರಾಷ್ಟ್ರದ ಪ್ರಧಾನಿ ನರೇಂದ್ರ ಮೋದಿ ಅವರು ಗಣರಾಜ್ಯೋತ್ಸವದ ಪ್ರಯುಕ್ತ ಜಾಂಟಿರೋಡ್ಸ್‌ ಅವರಿಗೆ ಪತ್ರ ಬರೆದಿದ್ದಾರೆ. ಜಾಂಟಿ ರೋಡ್ಸ್‌ ಅವರಿಗೆ ಗಣರಾಜ್ಯೋತ್ಸವದ ಶುಭಾಷಯ ತಿಳಿಸಿ ಬರೆದಿರುವ ಈ ಪತ್ರ ಈಗ ವೈರಲ್‌ ಆಗಿದೆ. ಜಾಂಟಿ ರೋಡ್ಸ್‌ ಅವರು ಕೂಡ ಆ ಪತ್ರವನ್ನು ತಮ್ಮ ಟ್ವಿಟರ್‌ನಲ್ಲಿ ಶೇರ್‌ ಮಾಡಿ ಭಾರತ ಮೇಲಿನ ಅಭಿಮಾನ ಮೆರೆದಿದ್ದಾರೆ.

ಭಾರತದ ಸಂಸ್ಕೃತಿ ಸಂಪ್ರದಾಯಕ್ಕೆ ಮಾರುಹೋಗಿರುವ ಜಾಂಟಿ ರೋಡ್ಸ್‌ ಅವರಿಗೆ ಮೋದಿ ಅವರ ಪತ್ರ, ಜಾಂಟಿ ಅವರಿಗೆ ಭಾರತದ ಮೇಲಿರುವ ಗೌರವವನ್ನು ಮತ್ತಷ್ಟು ಹೆಚ್ಚಿಸಿದೆ.

Share Post