CrimeNational

ನಕಲಿ ಕೋ-ಆಪರೇಟಿವ್‌ ಸೊಸೈಟಿ ಹೆಸರಲ್ಲಿ ಕೋಟಿ ಕೋಟಿ ಪಂಗನಾಮ

ಕರ್ನೂಲು: ಎಲ್ಲಿವರೆಗೂ ಮೋಸ ಹೋಗುವವರು ಇರ್ತಾರೋ ಅಲ್ಲಿವರೆಗು ಮೋಸ ಮಾಡುವವರು ಇರ್ತಾರೆ. ಜನರ ಅಮಾಯಕತ್ವವನ್ನು ಕೆಲ ಕಿರಾತಕರು ಬಂಡವಾಳವನ್ನಾಗಿ ಮಾಡಿಕೊಂಡು ಅವರಿಗೆ ಪಂಗನಾಮ ಹಾಕ್ತಾರೆ. ಹಾಗೆ ಖಾಸಗಿ ಕೊ-ಆಪರೇಟಿವ್‌ ಬ್ಯಾಂಕ್‌ ಅಂತ ಹೇಳಿ ಜನರಿಗೆ ನಂಬಿಸಿ ಕೋಟಿ ಕೋಟಿ ಹಣವನ್ನು ಲೂಟಿ ಮಾಡಿರುವ ಘಟನೆ ನೆರೆ ರಾಜ್ಯದ ಆಂಧ್ರಪ್ರದೇಶದ ಕರ್ನೂಲ್‌ ಜಿಲ್ಲೆಯಲ್ಲಿ ನಡೆದಿದೆ.

ಕರ್ನೂಲ್‌ ಜಿಲ್ಲೆಯ ಕೋಡುಮೂರು ಎಂಬಲ್ಲಿ ಮುದ್ರ ಅಗ್ರಿಕಲ್ಚರ್‌ ಸ್ಕಿಲ್ ಡೆವಲಪ್‌ಮೆಂಟ್‌ ಮಲ್ಟಿಸ್ಟೇಟ್ಸ್‌ ಕೊ-ಆಪರೇಟಿವ್‌ ಸೊಸೈಟಿ ಪ್ರೈವೇಟ್‌ ಲಿಮಿಟೆಡ್‌ ಹೆಸರಲ್ಲಿ ಜನರಿಂದ ಹಗಲು ದರೋಡೆ ಮಾಡಿದೆ. ಸ್ಥಳೀರ ರೈತರು, ವ್ಯಾಪಾರಿಗಳು, ಮಹಿಳಾ ಸಂಘ ಸೇರಿದಂತೆ ಸಾಮಾನ್ಯ ಜನರಿಂದ ದಿನನಿತ್ಯದ ಕಲೆಕ್ಷನ್‌ ಹೆಸರಲ್ಲಿ ಕೆಲವು ತಿಂಗಳುಗಳಿಂದ ವಸೂಲಿ ನಡೆಯುತ್ತಿತ್ತು. ಇದ್ದಕ್ಕಿದ್ದಂತೆ. ಕೋ-ಆಪರೇಟಿವ್‌ ಸೊಸೈಟಿ ಕಚೇರಿ ಬಂದ್‌ ಆಗಿದೆ. ಇದರಿಂದ ಹಣ ಕಳೆದುಕೊಂಡ ಜನ ಕಣ್ಣೀರಿಟ್ಟು ಕಚೇರಿ ಮುಂದೆ ಹಿಡಿ ಶಾಪ ಹಾಕ್ತಿದಾರೆ. ಒಂದೊಂದು ರೂಪಾಯಿ ಕೂಡಿಟ್ಟ ಹಣವನ್ನಿ ಇವರ ನೆತ್ತಿ ಮೇಲೆ ಸುರಿದಂಗಾಯ್ತಲ್ಲಾ ಎಂದು ಜನ ಬಾಯಿ ಬಡಿದುಕೊಳ್ತಿದಾರೆ.

ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಬರೋಬ್ಬರಿ ನೂರು ಕೋಟಿಗೂ ಹೆಚ್ಚು ಹಣ ಸಂಗ್ರಹಿಸಿ ಜನರಿಗೆ ಉಂಡೇನಾಮ ಹಾಕಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ. ಎರಡು ತೆಲುಗು ರಾಜ್ಯಗಳಲ್ಲೂ ಹಲವಾರು ಬ್ರಾಂಚ್‌ಗಳನ್ನು ಹೊಂದಿರುವ ಈ ಕೊ-ಆಪರೇಟಿವ್‌ ಸೊಸೈಟಿ ವಿರುದ್ಧ ಜನ ತಿರುಗಿ ಬಿದ್ದಿದ್ದಾರೆ. ಈ ಸೊಸೈಟಿಯ ಇತರೆ ಬ್ರಾಂಚ್‌ಗಳಿಗೆ ಜನ ನುಗ್ಗಿ ತಮ್ಮ ಹಣ ವಾಪಸ್‌ ನೀಡುವಂತೆ ಆಗ್ರಹಿಸಿದ್ದಾರೆ.

Share Post