ಹಿಮಾಚಲದಲ್ಲಿ ಹೆಚ್ಚಿದ ಹಿಮಪಾತ; ಮಂಜಿನಲ್ಲೇ ಗಣರಾಜ್ಯೋತ್ಸವ ತಾಲೀಮು
ಶಿಮ್ಲಾ: ಹಿಮಾಚಲದಲ್ಲಿ ಸಣ್ಣ ಮಳೆ ಹಾಗೂ ಭಾರಿ ಹಿಮಪಾತ ಮುಂದುವರೆದಿದೆ. ಎಲ್ಲೆಲ್ಲೂ ಹಿಮವೇ ತುಂಬಿಹೋಗಿದೆ. ರಸ್ತೆಗಳ ತುಂಬೆಲ್ಲಾ ಹಿಮ ಆವರಿಸಿದೆ. ಇನ್ನೂ ಎರಡು ದಿನಗಳ ಕಾಲ ವಾತಾವರಣ ಹೀಗೆಯೇ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಮುಂದಿನ 72 ಗಂಟೆಗಳಲ್ಲಿ ಹಿಮಾಚಲದಲ್ಲಿ ಹವಾಮಾನ ಅತಿ ಕೆಟ್ಟದಾಗಿರುತ್ತದೆ. ಎಲ್ಲೆಲ್ಲೂ ದಟ್ಟ ಮಂಜು ಆವರಿಸಿರುತ್ತದೆ. ಜೊತೆಗೆ ಸಣ್ಣ ಮಳೆಯೂ ನಿರಂತವಾಗಿ ಸುರಿಯಲಿದೆ. ಇದ್ರಿಂದಾಗಿ ಏನೂ ಕಾಣದಂತೆ ದಟ್ಟ ಮುಂಜು ಆವರಿಸಿರುತ್ತದೆ. ಹೀಗಾಗಿ, ವಾಹನ ಸಂಚಾರ ಕಷ್ಟವಾಗಬಹುದು. ಜನರು ಈ ಬಗ್ಗೆ ಎಚ್ಚರಿಕೆಯಿಂದ ಇರಬೇಕು ಎಂದು ಹವಾಮಾನ ಇಲಾಖೆ ಹೇಳಿದೆ.
ಇನ್ನು ದಟ್ಟ ಮಂಜಿನ ನಡುವೆ ಪ್ರವಾಸಿಗರು ಮೋಜು ಮಸ್ತಿಯಲ್ಲಿ ತೊಡಗಿದ್ದಾರೆ. ಇತ್ತ ಸ್ಥಳೀಯ ಆಡಳಿತಗಳು, ರಸ್ತೆಗಳಲ್ಲಿ ಶೇಖರಣೆಯಾಗುತ್ತಿರುವ ರಾಶಿ ರಾಶಿ ಹಿಮವನ್ನು ತೆರವುಗೊಳಿಸುವ ಕಾರ್ಯದಲ್ಲಿ ನಿರತವಾಗಿದೆ.
ಇನ್ನು ಗಣರಾಜ್ಯೋತ್ಸವದ ಹಿನ್ನೆಲೆಯಲ್ಲಿ ಪೊಲೀಸ್ ಪಡೆಗಳು ಮತ್ತು ಇತರ ಅರೆಸೈನಿಕ ಸಿಬ್ಬಂದಿ ರಿಡ್ಜ್ ಮೈದಾನದಲ್ಲಿ ಹಿಮ ಮತ್ತು ಅತ್ಯಂತ ಕೆಟ್ಟ ಹವಾಮಾನದಲ್ಲೂ ಉತ್ಸಾಹದಿಂದ ತಾಲೀಮು ನಡೆಸಿದರು.