CinemaSports

ವೈರಲ್‌ ವೀಡಿಯೋ : ಬಾಂಗ್ಲಾ ಬೌಲರ್‌ನಿಂದ ಪುಷ್ಪ ಸ್ಟೈಲ್‌ ಅನುಕರಣೆ

ಪುಷ್ಪ ದಿ ರೈಸ್‌ ಸಿನಿಮಾ ಸಾಕಷ್ಟು ಜನಪ್ರೀಯತೆಗಳಿಸಿದೆ ಎಂಬುದು ನಮಗೆಲ್ಲರಿಗೂ ತಿಳಿದಿರುವ ವಿಚಾರ. ಆದರೆ ಅದು ಭಾರತದ ಗಡಿ ದಾಟಿ ನೆರೆ ರಾಷ್ಟ್ರದಲ್ಲಿಯೂ ಹವಾ ಸೃಷ್ಠಿಸಿದೆ ಎಂಬುದು ತಾಜಾ ಸುದ್ದಿ.

ಬಾಂಗ್ಲಾದೇಶದಲ್ಲಿ ಬಾಂಗ್ಲಾ ಪ್ರೀಮಿಯರ್‌ ಲೀಗ್‌ ಎರಡು ದಿನಗಳ ಹಿಂದಷ್ಟೇ ಶುರು ಆಗಿದೆ. ನಿನ್ನೆ ಭಾನುವಾರ ನಡೆದ ಪಂದ್ಯದಲ್ಲಿ ಬಾಂಗ್ಲಾ ಬೌಲರ್‌ ವಿಕೆಟ್‌ ಪಡೆದಾಗ ಪುಷ್ಪ ಸಿನಿಮಾದ ಅಲ್ಲು ಅರ್ಜುನ್‌ ಅವರ ಮ್ಯಾನರಿಸಂ ಅನ್ನು ಅನುಕರಣೆ ಮಾಡಿದ್ದಾರೆ. ಈಗ ಈ ವೀಡಿಯೋ ಎಲ್ಲೆಡೆ ವೈರಲ್‌ ಆಗಿದೆ.

ಬಾಂಗ್ಲಾ ಬೌಲರ್‌ ಸೇರಿದಂತೆ ಹಲವಾರು ಕ್ರಿಕೆಟ್‌ ತಾರೆಯರು ಪುಷ್ಪ ಸಿನಿಮಾದ ಹಾಡು/ಡೈಲಾಗ್‌ ಅನುಕರಣೆ ಮಾಡುತ್ತಿದ್ದಾರೆ. ಇನ್ಸ್ಟಾಗ್ರಾಂನಲ್ಲಿ ಸದಾ ಆಕ್ಟೀವ್‌ ಆಗಿರುವ ಡೇವಿಡ್‌ ವಾರ್ನರ್‌ ಅವರು ಈ ಮುಂಚೆ ತಗ್ಗೆದೆ ಲೇ ಡೈಲಾಗಿಗೆ ರೀಲ್‌ ಮಾಡಿದ್ದರು, ಇನ್ನು ಇತ್ತೀಚೆಗೆ ಶ್ರೀವಲ್ಲಿ ಕನ್ನಡದ ಹಾಡಿಗೆ ಹೆಜ್ಜೆ ಹಾಕಿ ಬಾರಿ ಸಂಚಲನ ಮೂಡಿಸಿದ್ದರು.

ರವೀಂದ್ರ ಜಡೇಜಾ, ಸುರೇಶ್‌ ರೈನಾ ಸೇರಿದಂತೆ ಇನ್ನು ಹಲವಾರು ಕ್ರಿಕೆಟರ್‌ಗಳು ಪುಷ್ಪ ಸಿನಿಮಾಗೆ ಫಿದಾ ಆಗಿದ್ದಾರೆ.

Share Post