ವಿರಾಟ್ಗೆ ಶೋಕಾಸ್ ನೀಡಿಲ್ಲ : ಗಂಗೂಲಿ ಸ್ಪಷ್ಟನೆ
ಮುಂಬೈ : ವಿರಾಟ್ ಕೊಹ್ಲಿಗೆ ನಾವು ಶೋಕಾಸ್ ನೋಟೀಸ್ ನೀಡಿಲ್ಲ. ವಿರಾಟ್ ಅವರಿಗೆ ಬಿಸಿಸಿಐ ಇಂದ ಶೋಕಾಸ್ ನೀಡಲಾಗುವುದು ಎಂಬ ವದಂತಿಗಳು ಹರಿದಾಡುತ್ತಿವೆ. ಅವೆಲ್ಲವೂ ಸುಳ್ಳು ಎಂದು ಸೌರವ್ ಗಂಗೂಲಿ ತಿಳಿಸಿದ್ದಾರೆ.
ಕಳೆದ ವರ್ಷದಿಂದ ವಿರಾಟ್ ಅವರ ವೃತ್ತಿ ಜೀವನ ಅಷ್ಟು ಸಲೀಸಾಗಿ ಸಾಗುತ್ತಿಲ್ಲ. ಕೆಲವು ತಿಂಗಳುಗಳ ಹಿಂದೆ ಟಿ 20 ನಾಯಕ ಪಟ್ಟದಿಂದ ಕೆಳಗಿಳಿದಿದ್ದರು ವಿರಾಟ್. ಆನಂತರ ಏಕದಿನ ಸರಣಿಗೆ ರೋಹಿತ್ ಶರ್ಮ ಅವರನ್ನು ನಾಯಕರನ್ನಾಗಿ ನೇಮಿಸಲಾಗಿತ್ತು.
ನನ್ನ ಅರಿವಿಗೆ ಈ ವಿಷಯ ಬಂದಿಲ್ಲ ಎಂದು ವಿರಾಟ್ ಸುದ್ದಿಘೋಷ್ಠಿಯಲ್ಲಿ ಹೇಳಿದ್ದರು. ಇದರಿಂದ ಸಾಕಷ್ಟು ವಿವಾದಗಳು ಹುಟ್ಟಿಕೊಂಡಿತ್ತು.
ಬಿಸಿಸಿಐ ಅಧ್ಯಕ್ಷ ಸೌರವ ಗಂಗೂಲಿ ಮತ್ತು ವಿರಾಟ್ ಕೊಹ್ಲಿ ನಡುವೆ ಏನೂ ಸರಿ ಇಲ್ಲ ಎಂಬ ಸುದ್ದಿ ಹರಿದಾಡಲು ಶುರು ಆಗಿತ್ತು. ವಿರಾಟ್ ಅವರು ದ. ಆಫ್ರಿಕಾ ಪ್ರವಾಸಕ್ಕೆ ತೆರಳುವ ಮುನ್ನ ಗಂಗೂಲಿ ಶೋಕಾಸ್ ನೀಡಲಿದ್ದಾರೆ ಎಂದು ಹೇಳಲಾಗಿತ್ತು.
ಈ ವಿಚಾರ ಕುರಿತು ಮಾತನಾಡಿದ ಗಂಗೂಲಿ ನಾನು ಯಾವ ಶೋಕಾಸ್ ಅನ್ನು ನೀಡಿಲ್ಲ. ವದಂತಿಗಳನ್ನು ನಂಬಬೇಡಿ ಎಂದು ಹೇಳಿದರು. ಟಿ-20 ನಾಯಕತ್ವವನ್ನು ಬಿಡಬೇಡಿ ಎಂದು ನಾವು ವಿನಂತಿ ಮಾಡಿದ್ದೇವು. ಆದರೆ ಅವರೇ ಬಿಟ್ಟದ್ದು. ವೈಟ್ ಬಾಲ್ ಫಾರ್ಮ್ಯಾಟ್ಗೆ ಒಬ್ಬರೇ ನಾಯಕರಿರಬೇಕು ಎಂದು ಆಯ್ಕೆ ಸಮಿತಿ ಕೊಹ್ಲಿಯವರನ್ನು ಕೆಳಗಿಳಿಸಿದೆ ಅಷ್ಟೇ ಎಂದು ಸ್ಪಷ್ಟನೆ ನೀಡಿದೆ.