ಪಾಕ್‌ನಲ್ಲಿ ಚಪ್ಲಿ ಮಾರುತ್ತಿದ್ದಾರಂತೆ ಈ ಕ್ರಿಕೆಟ್ ಅಂಪೈರ್..!
ಇಸ್ಲಾಮಾಬಾದ್; ನೂರಕ್ಕೂ ಹೆಚ್ಚು ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳಲ್ಲಿ ಅಂಪೈರ್ ಆಗಿದ್ದ ಪಾಕಿಸ್ತಾನದ ಅಸಾದ್ ರೌಫ್ ಇದೀಗ ಲಾಹೋರ್‌ನ ಲಾಂಡಾ ಬಜಾರ್‌ನಲ್ಲಿ ಚಪ್ಪಲಿ, ಬಟ್ಟೆ ಮಾಡುತ್ತಿರುವ ಬಗ್ಗೆ ವರದಿಯಾಗಿದೆ. ಲಾಹೋರ್‌ನಲ್ಲಿ ಲಾಂಡಾ ಬಜಾರ್ ಕಡಿಮೆ ಬೆಲೆಗೆ ಬಟ್ಟೆ, ಚಪ್ಪಲಿಗಳು ಮತ್ತು ಇತರ ಸರಕುಗಳು ಸಿಗುವ ಸ್ಥಳ. ಲಾಂಡಾ ಬಜಾರ್‌ನಲ್ಲಿರುವ ಕೆಲವು ಅಂಗಡಿಗಳು ಸೆಕೆಂಡ್ ಹ್ಯಾಂಡ್ ಸರಕುಗಳ ಮಾರಾಟಕ್ಕೆ ಪ್ರಸಿದ್ಧಿ ಪಡೆದಿವೆ. ಇದೀಗ ಈ ಸ್ಥಳದಲ್ಲಿ ಅಸಾದ್ ರೌಫ್ ಬಟ್ಟೆ, ಚಪ್ಪಲಿ, ಶೂಗಳನ್ನು ಮಾರಾಟ ಮಾಡುತ್ತಿದ್ದಾರೆ.
ರೌಫ್ ಐಪಿಎಲ್‍ನಲ್ಲೂ ಕೂಡ ಅಂಪೈರ್ ಆಗಿ ಕೆಲಸ ನಿರ್ವಹಿಸಿದ್ದರು. ಆದರೆ ರೌಫ್ 2013ರ ಐಪಿಎಲ್‍ನಲ್ಲಿ ಬುಕ್ಕಿಗಳೊಂದಿಗೆ ಸಂಪರ್ಕಿಸಿ ದುಬಾರಿ ಉಡುಗೊರೆ ಪಡೆದಿದ್ದರು. ಇದರ ವಿಚಾರಣೆ ನಡೆಸಿದ ಐಸಿಸಿಯ ಶಿಸ್ತು ಸಮಿತಿ ಆರೋಪ ಸಾಬೀತಾದ ಬಳಿಕ ರೌಫ್‍ರನ್ನು 2016ರ ನಂತರ ಐದು ವರ್ಷಗಳ ಕಾಲ ಅಂತಾರಾಷ್ಟ್ರೀಯ ಪಂದ್ಯಗಳ ಅಂಪೈರಿಂಗ್‍ಗೆ ನಿಷೇಧ ಹೇರಿತ್ತು. ಈ ಮೂಲಕ ಅಸಾದ್ ರೌಫ್ ಅಂಪೈರ್ ವೃತ್ತಿ ಅಂತ್ಯ ಕಂಡಿದೆ.