Cinema

ʼಯದುವೀರʼ ಆಗಲಿದ್ದಾರೆ ಸ್ಯಾಂಡಲ್‌ವುಡ್‌ ಯುವರಾಜ

ಬೆಂಗಳೂರು : ನಿಖಿಲ್‌ ಕುಮಾರಸ್ವಾಮಿ ಅವರು ಇಂದು ತಮ್ಮ 32ನೇ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. 32ನೇ ವಸಂತಕ್ಕೆ ಕಾಲಿಟ್ಟಿರುವ ನಿಖಿಲ್‌ ತಮ್ಮ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ.

KVN ಪ್ರೊಡಕ್ಷನ್‌ ಅವರ ಹೆಸರಿಡದ ಚಿತ್ರದಲ್ಲಿ ನಟಿಸುತ್ತಿದ್ದ ನಿಖಿಲ್‌ ಅವರ ಸಿನಿಮಾದ ಟೈಟಲ್‌ ಅನ್ನು ಚಿತ್ರತಂಡ ರಿವೀಲ್‌ ಮಾಡಿದೆ. ʼಯದುವೀರʼ ಎಂಬ ಶೀರ್ಷಿಕೆ ಹೊತ್ತಿರುವ ನಿಖಿಲ್‌ ಅವರ ಮುಂದಿನ ಸಿನಿಮಾಗೆ ಸಾಕಷ್ಟು ಜನ ಅಭಿಮಾನಿಗಳು ಶುಭಾಷಯಗಳನ್ನು ತಿಳಿಸಿದ್ದಾರೆ.

ಕೋವಿಡ್‌ ಮತ್ತು ಇನ್ನಿತರ ಕಾರಣಗಳಿಂದ ಈ ಬಾರಿ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿಲ್ಲ, ದಯವಿಟ್ಟು ಯಾರು  ಮನೆಯ ಹತ್ತಿರ ಬರಬೇಡಿ ಎಂದು ನಿಖಿಲ್‌ ತಮ್ಮ ಅಭಿಮಾನಿಗಳ ಬಳಿ ವಿನಂತಿಸಿಕೊಂಡಿದ್ದರು.

ಮಂಜು ಅಥರ್ವ ನಿರ್ದೇಶನದಲ್ಲಿ ಮೂಡಿ ಬರಲಿರುವ ಯದುವೀರ ಸಿನಿಮಾದ ಫರ್ಸ್ಟ್‌ ಲುಕ್‌ ಪೋಸ್ಟರ್‌ ಬಿಡುಗಡೆ ಮಾಡಿ ಅಭಿಮಾನಿಗಳಿಗೆ ಬರ್ತಡೆ ಉಡುಗೊರೆ ನೀಡಿದ್ದಾರೆ.

Share Post