Crime

ನಕಲಿ ಅಂಕಪಟ್ಟಿಗಳ ಮಾರಾಟ; ಇಬ್ಬರು ಖದೀಮರ ಬಂಧನ

ಮುಂಬೈ: ನಕಲಿ ಪದವಿ ಸರ್ಟಿಫಿಕೇಟ್‌ ಮಾರ್ಕ್ಸ್‌ ಕಾರ್ಡ್‌ಗಳನ್ನು ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. ಇಲ್ಲಿನ ಬೊರಿವಲಿಯಲ್ಲಿ ದಾಳಿ ನಡೆಸಿದ ಪೊಲೀಸರು, ನಕಲಿ ಮಾರ್ಕ್ಸ್‌ ಕಾರ್ಡ್‌ ಸಮೇತ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ಆರೋಪಿಗಳು ವಿವಿಧ ವಿಶ್ವವಿದ್ಯಾಲಯಗಳ ಡಿಗ್ರಿ ಮತ್ತು ಮಾಸ್ಟರ್‌ ಡಿಗ್ರಿ ಸರ್ಟಿಫಿಕೇಟ್‌ ಹಾಗೂ ಮಾರ್ಕ್ಸ್‌ಗಳನ್ನು ಅಕ್ರಮವಾಗಿ ತಯಾರಿಸುತ್ತಿದ್ದರು. ಹೀಗೆ ನೂರಾರು ಮಂದಿಗೆ ನಕಲಿ ಸರ್ಟಿಫಿಕೇಟ್‌ಗಳನ್ನು ಮಾರಾಟ ಮಾಡಿದ್ದರು. ಕೊನೆಗೂ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ. ಇದರ ಹಿಂದೆ ಒಂದು ಗ್ಯಾಂಗ್‌ ಇದೆ ಎಂದು ತಿಳಿದುಬಂದಿದ್ದು, ಪ್ರಮುಖ ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

Share Post