National

ಗಡಿಯಲ್ಲಿ ಉಗ್ರರ ಮಟ್ಟಹಾಕಲು ನೂರು ಬಿಎಸ್‌ಎಂ ನಾಯಿಗಳ ಸೇರ್ಪಡೆ

ಜಮ್ಮು ಕಾಶ್ಮೀರ:  ಉಗ್ರವಾದಿಗಳ ಅಟ್ಟಹಾಸ ತ್ತುಂಗಕ್ಕೇರಿದ್ದು, ತಮ್ಮ ಕಾರ್ಯಾಚರಣೆಗೆ ಸಹಾಯಕವಾಗಲೆಂದು ಕೇಂದ್ರೀಯ ಮೀಸಲು ಪಡೆ ಹೊಸದಾಗಿ ತಮ್ಮ ಬೆಟಾಲಿಯನ್‌ಗೆ ನೂರು ನಾಯಿಗಳನ್ನು ಸೇರ್ಪಡೆ ಮಾಡಲಿದೆ. ಇದಕ್ಕಾಗಿ ಬೆಂಗಳೂರಿನಲ್ಲಿರುವ ಸಿಆರ್‌ಪಿಎಫ್‌ನ ಡಾಗ್ ಬ್ರೀಡಿಂಗ್ ಮತ್ತು ಟ್ರೈನಿಂಗ್ ಸ್ಕೂಲ್‌ನಲ್ಲಿ ಮರಿಗಳಿಗೆ ತರಬೇತಿ ನೀಡಲಾಗುತ್ತಿದೆ ಎಂದು ಸಿಆರ್‌ಪಿಎಫ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕೆ9 ಘಟಕಕ್ಕೆ 100 ನಾಯಿ ಮರಿಗಳನ್ನು ನಿಯೋಜಿಸಲಿದೆ. “ಎಲ್‌ಡಬ್ಲ್ಯೂಇ ಮತ್ತು ಜಮ್ಮು ಮತ್ತು ಕಾಶ್ಮೀರದ ಸುಧಾರಿತ ಸ್ಫೋಟಕ ಸಾಧನ (ಐಇಡಿ) ಪೀಡಿತ ಪ್ರದೇಶದಲ್ಲಿ ನಿಯೋಜಿಸಲಾದ ಸಿಆರ್‌ಪಿಎಫ್‌ನ ಕಾರ್ಯಾಚರಣೆ ಘಟಕಗಳು ತೀವ್ರವಾಗಿ ಒತ್ತಡ ಹೇರುತ್ತಿವೆ. ಈ ಹಿನ್ನೆಲೆಯಲ್ಲಿ ಸಿಆರ್‌ಪಿಎಫ್ ಬೆಲ್ಜಿಯನ್ ಶೆಪರ್ಡ್ ಮಲಿನೋಯಿಸ್ (ಬಿಎಸ್‌ಎಂ) ಮರಿಗಳಿಗೆ ತರಬೇತಿ ಪ್ರಕ್ರಿಯೆಯಲ್ಲಿ ನಿರತರಾಗಿದ್ದಾರೆ ಎನ್ನಲಾಗಿದೆ.

“ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ನಿಯೋಜಿಸಲಿರುವ ನಾಯಗಳಿಗೆ ಸ್ನಿಫಿಂಗ್ ಶಕ್ತಿಯು ದೊಡ್ಡ ಅನುಕೂಲವಾಗಿದೆ. ನಕ್ಸಲ್ ಪ್ರದೇಶದಲ್ಲಿರುವ ಪ್ರತಿ ಬೆಟಾಲಿಯನ್‌ನಲ್ಲಿ 14 ನಾಯಿಗಳಿವೆ ಮತ್ತು ಪ್ರತಿ ಬಾರಿ ತಂಡವು ಗಸ್ತು ತಿರುಗಲು ಹೋದಾಗ, ಯಾವುದೇ ಹೊಂಚುದಾಳಿ, ಸ್ಫೋಟಕಗಳನ್ನು ಪತ್ತೆ ಮಾಡಲು ತಂಡದ ಜೊತೆಗೆ ಕಾರಾಯಚರಣೆ ನಡೆಸಲಿವೆ. ಸಿಆರ್‌ಪಿಎಫ್ ಹೆಚ್ಚಾಗಿ ಬೆಲ್ಜಿಯನ್ ಶೆಪರ್ಡ್ ಮಾಲಿನೋಯಿಸ್ (ಬಿಎಸ್‌ಎಂ) ಮರಿಗಳನ್ನು ಮಾತ್ರ ಹೆಚ್ಚು ಒತ್ತು ನೀಡಲಾಗಿದೆಯಂತೆ.

“BSM ವಿಶ್ವದ ಅತ್ಯುತ್ತಮ ಪೊಲೀಸ್ ನಾಯಿಯಾಗಿದೆ. ವಿವಿಧ ಸಂಸ್ಥೆಗಳು ತಮ್ಮ ಅವಶ್ಯಕತೆಗೆ ಅನುಗುಣವಾಗಿ ವಿಭಿನ್ನ ತಳಿಗಳನ್ನು ಬಳಸುತ್ತವೆ. ಕೆಲವು ಪಡೆಗಳು ಲ್ಯಾಬ್ರಡಾರ್ ಮತ್ತು ಕಾಕರ್ ಸ್ಪೈನಿಯಲ್ ಅನ್ನು ಬಳಸುತ್ತವೆ ಏಕೆಂದರೆ ಅವುಗಳು ಮೆಟ್ರೋ, ವಿಮಾನ ನಿಲ್ದಾಣಗಳು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಸ್ನಿಫಿಂಗ್ ಮಾಡಲು ಬಳಸಲ್ಪಡುತ್ತವೆ. ಸಿಆರ್‌ಪಿಎಫ್‌ನಲ್ಲಿ ನೇಮಿಸಿಕೊಳ್ಳುವ ನಾಯಿಗಳಿಗೆ 90 ದಿನಗಳು ದಾಟಿದ ನಂತರ ತರಬೇತಿಯನ್ನು ಪ್ರಾರಂಭಿಸಲಾಗುತ್ತದೆ. ತರಬೇತಿಯ ಸಮಯದಲ್ಲಿ, ನಾಯಿಗಳಿಗೆ ಸಾಮಾಜಿಕ ಆಕರ್ಷಣೆ, ಅನುಸರಣೆ, ಸಂಯಮ, ಸಾಮಾಜಿಕ ಪ್ರಾಬಲ್ಯ, ಎತ್ತರದ ಪ್ರಾಬಲ್ಯ, ಮರುಪಡೆಯುವಿಕೆ, ಸ್ಪರ್ಶ ಸಂವೇದನೆ, ಧ್ವನಿ ಸಂವೇದನೆ, ದೃಷ್ಟಿ ಸೂಕ್ಷ್ಮತೆ ಮತ್ತು ಸ್ಥಿರತೆಗಾಗಿ ತರಬೇತಿ ನೀಡಲಾಗುತ್ತದೆ.

 

Share Post