CrimeNational

ಡ್ಯಾನ್ಸರ್‌ ಮೇಲೆ 3 ದಿನದಿಂದ ನಿರಂತರ ಅತ್ಯಾಚಾರ!

ಆಗ್ರಾ; ಇವೆಂಟ್‌ಗಳಲ್ಲಿ ಡ್ಯಾನ್ಸ್‌ ಮಾಡುವ ಡ್ಯಾನ್ಸರ್‌ ಒಬ್ಬಳ ಮೇಲೆ ಬಲವಂತವಾಗಿ ಅತ್ಯಾಚಾರ ಎಸಗಲಾಗಿದೆ.. ಫ್ಲ್ಯಾಟ್‌ ಒಂದರಲ್ಲಿ ಇವೆಂಟ್‌ ಮ್ಯಾನೇಜರ್‌ ಒಬ್ಬ ಡ್ಯಾನ್ಸರ್‌ ಯುವತಿಯನ್ನು ಒತ್ತೆಯಾಳಾಗಿರಿಸಿಕೊಂಡು ನಿರತಂರ ಅತ್ಯಾಚಾರ ಎಸಗಿದ್ದಾನೆ ಎಂದು ತಿಳಿದುಬಂದಿದೆ.. ಉತ್ತರ ಪ್ರದೇಶದ ಘಾಜಿಯಾಬಾದ್‌ನಲ್ಲಿ ಈ ಘಟನೆ ನಡೆದಿದೆ..
26 ವರ್ಷದ ಡ್ಯಾನ್ಸರ್‌ ಮೇಲೆ ಈ ಕೃತ್ಯ ಎಸಗಲಾಗಿದೆ.. ಸಂತ್ರಸ್ತೆಯನ್ನು ಆಗ್ರಾದಲ್ಲಿ ನಡೆಯುವ ಕಾರ್ಯಕ್ರಮಕ್ಕಾಗಿ ಇವೆಂಟ್‌ ಮ್ಯಾನೇಜರ್‌ ಸಂಪರ್ಕ ಮಾಡಿದ್ದನಂತೆ.. ನಂತರ ಆಕೆಯನ್ನು ಆರೋಪಿ ಗುಪ್ತಾ ತನ್ನ ನಿವಾಸಕ್ಕೆ ಕರೆಸಿಕೊಂಡಿದ್ದಾನೆ.. ನಿದ್ರೆ ಮಾತ್ರ ಹಾಕಿದ ಚಹಾ ಕೊಟ್ಟು ಆಕೆಯ ಮೇಲೆ ಅತ್ಯಾಚಾರ ಎಸಗಲಾಗಿದೆ ಎಂಬ ಆರೋಪ ಕೇಳಿಬಂದಿದೆ.. ಬೆಳಗ್ಗೆ ಎದ್ದಾಗ ಡ್ಯಾನ್ಸರ್‌ ಒಂದು ಕೊಠಡಿಯಲ್ಲಿ ಇದ್ದುದಾಗಿ ಪೊಲೀಸರಿಗೆ ನೀಡಿದ ದೂರಿನಲ್ಲಿ ಹೇಳಿಕೊಂಡಿದ್ದಾಳೆ..
ಮೂರು ದಿನ ಒತ್ತೆಯಾಳಾಗಿರಿಸಿಕೊಂಡು ನನ್ನ ಮೇಲೆ ಅತ್ಯಾಚಾರ ಎಸಗಲಾಗಿದೆ ಎಂದು ಇವೆಂಟ್‌ ಮ್ಯಾನೇಜರ್‌ ಗುಪ್ತಾ ವಿರುದ್ಧ ಆರೋಪ ಮಾಡಲಾಗಿದೆ.. ಜೊತೆಗೆ ಹೆಚ್ಚಿನ ಹಣ ಸಂಪಾದನೆ ಮಾಡಬಹುದು. ಸುಖದಿಂದ ಬದುಕಬಹುದು. ನೀನು ವೇಶ್ಯೆಯಾಗು ಎಂದು ಬಲವಂತ ಮಾಡಿದ್ದಾನೆ ಎಂದೂ ಆರೋಪಿಯ ವಿರುದ್ಧ ಆರೋಪ ಮಾಡಲಾಗಿದೆ..
ಸಂತ್ರಸ್ತೆ ತಪ್ಪಿಸಿಕೊಂಡು ಬಂದು ಪೊಲೀಸರಿಗೆ ದೂರು ನೀಡಿದ್ದಾಳೆ.. ಶನಿವಾರ ಪೊಲೀಸರು ಎಫ್‌ಐಆರ್‌ ದಾಖಲಿಸಿಕೊಂಡು ವಿನಯ್‌ ಗುಪ್ತಾ ಹಾಗೂ ಆತನ ಪತ್ನಿಯನ್ನು ಬಂಧಿಸಿದ್ದಾರೆ..

Share Post