DistrictsPolitics

ಮೋದಿ ಭೇಟಿ ಬೆನ್ನಲ್ಲೆ ಬಿಜೆಪಿಯಲ್ಲಿ ಟಿಕೆಟ್ ಫೈಟ್

ತುಮಕೂರು; ತುಮಕೂರು ಜಿಲ್ಲೆಯಲ್ಲಿ ಪ್ರಧಾನಿ ಮೋದಿ ಮತ ಬೇಟಿ ಬಳಿಕ, ಹಾಲಿ ಶಾಸಕ ಹಾಗೂ ಜಿಲ್ಲಾ ಸಂಘಟನಾ ಅಧ್ಯಕ್ಷರ ನಡುವೆ ಟಿಕೆಟ್ ಗಾಗಿ ಬಿಗ್ ಫೈಟ್ ಆರಂಭವಾಗಿದೆ.

ಬೈ ಎಲೆಕ್ಷನ್ ನಲ್ಲಿ ಮೊದಲ ಭಾರಿಗೆ ಬಿಜೆಪಿ ಖಾತೆ ತೆರೆದಿದ್ದ ಶಿರಾದಲ್ಲಿ ಹಾಲಿ ಶಾಸಕ ರಾಜೇಶ್ ಗೌಡ ಹಾಗೂ ಮಧುಗಿರಿ ಸಂಘಟನಾತ್ಮಕ ಜಿಲ್ಲಾಧ್ಯಕ್ಷ ಬಿಕೆ ಮಂಜುನಾಥ್ ನಡುವೆ ಟಿಕೆಟ್ ಗಾಗಿ ಗುದ್ದಾಟ ನಡೆಯುತ್ತಿದೆ. ಈ ಬಗ್ಗೆ ಪತ್ರಿಕಾಗೋಷ್ಠಿ‌ ನಡೆಸುವ ಮೂಲಕ ಬಿ.ಕೆ.ಮಂಜುನಾಥ್ ಶಿರಾ ಕ್ಷೇತ್ರದಲ್ಲಿ ಬಿಜೆಪಿಯನ್ನ ಕಟ್ಟಿ ಬೆಳೆಸಿದ್ದು ನಾನು, ಕಳೆದ ಬಾರಿ ಬೈ ಎಲೆಕ್ಷನ್ ನಲ್ಲಿ ಬಿಜೆಪಿ ಗೆಲ್ಲಿಸಿದ್ದೆವೆ. ಈ ಬಾರಿಯೂ ಅನಾಯಸವಾಗಿ ಗೆಲ್ಲಿಸುತ್ತೇವೆ. ಈಗಾಗಿ ಟಿಕೆಟ್ ನನಗೆ ನೀಡಬೇಕು ಎಂದು ಒತ್ತಾಯಿಸಿದರು.

ಪ್ರಧಾನಿ ತುಮಕೂರು ಭೇಟಿ ಯಿಂದ ಜಿಲ್ಲಾ ಬಿಜೆಪಿಯಲ್ಲಿ ಆನೆ ಬಲ ಬಂದಂತಾಗಿದೆ. ಹೆಚ್ ಎ ಎಲ್ ಹೆಲಿಕಾಪ್ಟರ್ ಉದ್ಘಾಟನೆ ಕಾರ್ಯಕ್ರಮವನ್ನ ಹೈಜಾಕ್ ಮಾಡಿದ ಬಿಜೆಪಿ ಚುನಾವಣಾ ಪ್ರಚಾರವಾಗಿ ಮಾಡಿಕೊಂಡಿತು.ಮೋದಿ ಕಾರ್ಯಕ್ರಮಕ್ಕೆ ಸಾಗರೋಪಾಧಿಯಲ್ಲಿ ಜನರು ಹರಿದು ಬಂದರು. ಕನ್ನಡದಲ್ಲಿ ಪ್ರಧಾನಿ ಮೋದಿ ತಮ್ಮ ಭಾಷಣ ಆರಂಬಿಸುವ ಮೂಲಕ ರಾಗಿ ಮುದ್ದೆ, ರಾಗಿ ರೊಟ್ಟಿ ಬಗ್ಗೆ ಪ್ರಸ್ತಾಪಿಸುತ್ತಲೇ ಭರ್ಜರಿ ಮತ ಪ್ರಚಾರ ಮಾಡಿದರು. ಇದರಿಂದ ಜಿಲ್ಲೆಯಲ್ಲಿ ಬಿಜೆಪಿಗೆ ಆನೆ ಬಲ ತುಂಬಿದಂತಾಗಿದೆ.

ಮೋದಿ ಬೇಟಿ ಬಳಿಕ ಜಿಲ್ಲೆಯಲ್ಲಿ ಹಲವು ಕ್ಷೇತ್ರಗಳಲ್ಲಿ ಅನಾಯಾಸವಾಗಿ ಬಿಜೆಪಿ ಗೆಲ್ಲಲಿದೆ ಎಂಬ ಉದ್ದೇಶದಿಂದ ಟೀಕೆಟ್ ಫೈಟ್ ಜೋರಾಗಿದೆ ಎನ್ನಲಾಗಿದೆ

Share Post