ಕೇಂದ್ರದ ಬಜೆಟ್ ಕುರಿತು ರಾಜ್ಯ ನಾಯಕರ ಅಭಿಪ್ರಾಯ:ಪರ/ವಿರೋಧ
ಬೆಂಗಳೂರು: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ 90ನಿಮಿಷಗಳ ಕಾಲ ಮಂಡಿಸಿದ ಬಜೆಟ್ ಬಗ್ಗೆ ರಾಜ್ಯದ ವಿವಿಧ ಪಕ್ಷಗಳ ನಾಯಕರು ಪ್ರತಿಕ್ರಿಯೆ ನೀಡಿದ್ದಾರೆ. ಬಿಜೆಪಿ ನಾಯಕರು ಬಜೆಟ್ ಅನ್ನು ಸ್ವಾಗತಿಸಿದ್ರೆ. ವಿಪಕ್ಷ ನಾಯಕರು ಈ ಬಜೆಟ್ ಏನೂ ಅಲ್ಲ ಎಂದು ಅಲ್ಲಗೆಳೆದಿದ್ದಾರೆ.
ಇದರಲ್ಲಿ ಉಪ್ಪು, ಹುಳಿ, ಖಾರ ಏನೂ ಇಲ್ಲ-ಡಿ.ಕೆ.ಸುರೇಶ್
ಕೇಂದ್ರ ಸರ್ಕಾರದ ಬಜೆಟ್ ಬಗ್ಗೆ ಸಂಸದ ಡಿ.ಕೆ.ಸುರೇಶ್ ವ್ಯಂಗ್ಯವಾಡಿದ್ದಾರೆ. ಈ ಬಜೆಟ್‌ಬಲ್ಲಿ ಏನೂ ಇಲ್ಲ ವರದಿ ಹೇಳಿದಂತೆ ಇದೆ. ಈ ಬಜೆಟ್‌ನಲ್ಲಿ ಉಪ್ಪು, ಹುಳಿ, ಖಾರದ ಕೊರತೆಯಿದೆ. ಕೊವಿಡ್‌ನಿಂದ ಜನರು ತೊಂದರೆಗೊಳಗಾಗಿ ನರಳುತ್ತಿದ್ದಾರೆ ಅಂಥದ್ದರಲ್ಲಿ ಬಡವರಿಗೆ, ಮಧ್ಯಮ ವರ್ಗಕ್ಕೆ ಏನೂ ನೀಡಿಲ್ಲ. ರಾಜ್ಯಗಳಿಗೆ ಸಾಲದ ರೂಪದಲ್ಲಿ ಹಣ ಕೊಡ್ತಾರಂತೆ ಪ್ರಯೋಜನ ಏನು? ಈ ಬಗ್ಗೆ ಚರ್ಚಿಸುವುದಕ್ಕೂ ವಿಚಾರ ಇಲ್ಲ. ಪ್ರಧಾನಿ ಮೋದಿ ನಿರುದ್ಯೋಗವನ್ನು ಒಪ್ಪಿಕೊಂಡಿದ್ದಾರೆ. ಕೇವಲ, ಸುಳ್ಳು, ಭರವಸೆಗಳೇ ಬಿಜೆಪಿಯ ಮೂಲ ಮಂತ್ರವಾಗಿದೆ ಎಂದು ಲೇವಡಿ ಮಾಡಿದ್ರು.
ರಾಜ್ಯಕ್ಕೆ ಬಜೆಟ್‌ನಲ್ಲಿ ಪಾಲಿಲ್ಲ, ಎಲ್ಲವೂ ಖಾಲಿ: ರಾಜ್ಯಸಭಾ ಸಂಸದ ಜಿಸಿ ಚಂದ್ರಶೇಖರ್
ಈ ಬಜೆಟ್‌ನಲ್ಲಿ ಕರ್ನಾಟಕಕ್ಕೆ ಏನು ದೊರೆತಿಲ್ಲ ಎಲ್ಲಾ ಖಾಲಿ ಖಾಲಿ ಎಂದ್ರು. ನರೇಗಾ, ಸರ್ಬಬನ್‌ಗೆ ಹಣ ಇಟ್ಟಿಲ್ಲ ಎಂದು ಮಾತನಾಡಿದ ರಾಜ್ಯಸಭಾ ಸಂಸದ ಜಿಸಿ ಚಂದ್ರಶೇಖರ್, ನದಿ ಜೋಡಣೆ ವಿಚಾರ ಸಂಬಂಧಿಸಿದಂತೆ ಎಲ್ಲಾ ರಾಜ್ಯಗಳ ಒಪ್ಪಿಗೆ ಪಡೆದು ತೀರ್ಮಾನ ತೆಗೆದುಕೊಳ್ಳಲಾಗುತ್ತದೆ ಅಂತಾರೆ. ಈ ಮಾತು ಹೇಳಲು ಕೇಂದ್ರ ಸರ್ಕಾರ ಬೇಕಾ? ಕೇಂದ್ರದಿಂದ ರಾಜ್ಯಗಳನ್ನು ಒಪ್ಪಿಸಬೇಕು. ಇದು ನಿರಾಶಾದಾಯಕ ಬಜೆಟ್. ಕರ್ನಾಟಕಕ್ಕೆ ಸಂಪೂರ್ಣ ನಿರಾಸೆ ಎಂದ್ರು.
ಬಜೆಟ್ ಮೇಲೆ ನಂಬಿಕೆಯೇ ಹೋಗಿದೆ: ಪ್ರಜ್ವಲ್ ರೇವಣ್ಣ
ಇದು ಬಹಳ ನಿರಾಸಾದಾಯಕ ಬಜೆಟ್ ಆಗಿದೆ. ನಮಗೆ ಬಜೆಟ್ ಮೇಲಿನ ನಂಬಿಕೆಯೇ ಹೊರಟು ಹೋಗಿದೆ ಎಂದು ಸಂಸದ ಪ್ರಜ್ವಲ್ ರೇವಣ್ಣ ತಿಳಿಸಿದ್ದಾರೆ. 25 ಜನ ಬಿಜೆಪಿ ಎಂಪಿಗಳು ಕರ್ನಾಟಕ ದಿಂದ ಇದ್ದಾರೆ ರಾಜ್ಯಕ್ಕೆ ಏನ್ ತಂದಿದ್ದಾರೆ ಎಂದು ಪ್ರಶ್ನಿಸಿದ್ದಾರೆ? ಕರ್ನಾಟಕಕ್ಕೆ ಸಿಕ್ಕಿದ್ದು ಶೂನ್ಯ. ಫೇಲ್ ಬಜೆಟ್. ಬಹಳಷ್ಟು ನಿರೀಕ್ಷೆಗಳು ಇದ್ದವು. ಕಾವೇರಿ- ಮೇಕೆದಾಟು ವಿಚಾರಕ್ಕೆ ಬಜೆಟ್ ನಲ್ಲಿ ನಿರೀಕ್ಷೆ ಮಾಡಲಾಗಿತ್ತು. ಆದರೆ ಬಜೆಟ್‌ನಲ್ಲಿ ರಾಜ್ಯಗಳ ಸಹಮತ ಇದ್ದರೇ ಮಾತ್ರ ಜೋಡಣೆ ಎಂದಿದ್ದಾರೆ. ಇದು ಎಷ್ಟರ ಮಟ್ಟಿಗೆ ನ್ಯಾಯ. ಇದು ಕಳಪೆ ಬಜೆಟ್. ಕರ್ನಾಟಕ ಕ್ಕೆ ಏನು ಕೊಟ್ಟಿಲ್ಲ ಅಂತ ದೆಹಲಿಯಲ್ಲಿ ಸಂಸದ ಪ್ರಜ್ವಲ್ ರೇವಣ್ಣ ಹೇಳಿಕೆ ನೀಡಿದ್ದಾರೆ.
ಇದು ಜನಪರ ಬಜೆಟ್ ಎಂದ ಶ್ರೀರಾಮುಲು
ಬಜೆಟ್ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಚಿವ ಶ್ರೀರಾಮುಲು, ಪ್ರಧಾನಿ ಮೋದಿ ಹಾಗೂ ಹಣಕಾಸು ಮಂತ್ರಿ ನಿರ್ಮಲಾ ಸೀತಾರಾಮನ್ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಜೊತೆಗೆ ಇದು ಜನಪರ ಬಜೆಟ್ ಎಂದು ಘೋಷಣೆ ಮಾಡಿದ್ದಾರೆ. ನಮ್ಮ ರಾಜ್ಯಕ್ಕೆ ವಿಶೇಷ ಪ್ಯಾಕೇಜ್ ಕೊಡುವ ಸಾಧ್ಯತೆ ಇದೆ ಎಂಬ ಆಶಾದಾಯಕವನ್ನು ವ್ಯಕ್ತಪಡಿಸಿದ್ದಾರೆ. 100 ಕೋಟಿ ಜನರಿಗೆ ವ್ಯಾಕ್ಸಿನ್ ಕೊಟ್ಟು ಜನರ ಪ್ರಾಣ ಉಳಿಸಿದ್ದಾರೆ ಮೋದಿ. ಮಾಹಿತಿ ತಂತ್ರಜ್ಞಾನ, ಐಟಿ ಬಿಟಿಗೆ ಒತ್ತು ಕೊಟ್ಟಿದ್ದಾರೆ. ರೈತರಿಗೆ ಅನೇಕ ಯೋಜನೆ ಕೊಟ್ಟು ರೈತ ಹಿತ ಕಾದಿದ್ದಾರೆ. ಆರೋಗ್ಯಕ್ಕೆ, ಶಿಕ್ಷಣಕ್ಕೆ, ರಸ್ತೆ, ಸಾರಿಗೆ, ಮೂಲಭೂತ ಸಮಸ್ಯೆಗೆ ಸ್ಪಂದಿಸಿದ್ದಾರೆ. 2022 ರ 5 ಜಿ ತರಲು ಮುಂದಾಗಿ ಬಹುದಿನದ ಕನಸು ನನಸಾಗಿಸಿದ್ದಾರೆ. ನದಿ ಜೋಡಣೆಗೆ ಪೂರಕವಾಗುವ ಪ್ರಸ್ತಾಪ ಮಾಡಿದ್ದಾರೆ ಇದು ಅತ್ಯಂತ ಒಳ್ಳೆಯ ಬಜೆಟ್ ಎಂದಿದ್ದಾರೆ.
ನೀರಿನ ಹೋರಾಟಕ್ಕೆ ಮುಕ್ತಿ ಸಿಗಲಿದೆ: ಗೋವಿಂದ ಕಾರಜೋಳ
ಅನೇಕ ವರ್ಷಗಳಿಂದ ರಾಜ್ಯದಲ್ಲಿ ನೀರಿಗಾಗಿ ಹೋರಾಟ ಮಾಡುತ್ತಲೇ ಇದ್ದೇವೆ. ನದಿ ಜೋಡಣೆ ಯೋಜನೆ ಮೂಲಕ 25 ಲಕ್ಷ ಹೆಕ್ಟೇರ್ ಕೃಷಿ ಪ್ರದೇಶಕ್ಕೆ ಅನುಕೂಲವಾಗಲಿದೆ. ಕುಡಿಯುವ ನೀರಿನ ಸಮಸ್ಯೆ ನಿವಾರಣೆಯಾಗುತ್ತದೆ. ಪ್ರತೀ ಮನೆಗೂ ನಲ್ಲಿ ನೀರಿಗಾಗಿ 60 ಲಕ್ಷ ಕೋಟಿ ಅನುದಾನ ನೀಡಿದ್ದಾರೆ. ಎರಡು ಲಕ್ಷ ಅಂಗನವಾಡಿ ಕೇಂದ್ರಗಳನ್ನು ಮೇಲ್ದರ್ಜೆಗೆ ಏರಿಸಲಾಗುತ್ತಿದೆ. ಎಸ್ಸಿ, ಎಸ್ಟಿ, ಬಡ ರೈತರಿಗೆ ನೀರಾವರಿ ಸೌಲಭ್ಯ ಕೊಟ್ಟಿದ್ದಾರೆ. 400 ಹೊರ ರೈಲು ಮಾರ್ಗಗಳನ್ನು ಘೋಷಣೆ ಮಾಡಿದ್ದಾರೆ. ಸೋಲಾರ್ ವಿದ್ಯುತ್ ಯೋಜನೆಗೆ ಒತ್ತು ನೀಡಿದ್ದಾರೆ. 80 ಲಕ್ಷ ಮನೆ ಕೊಡುವ ಯೋಜನೆ ರೂಪಿಸಿದ್ದಾರೆ ಇದೆಲ್ಲವೂ ಅರ್ಥ ವ್ಯವಸ್ತೆಯನ್ನು ಮೇಲ್ದರ್ಜೆಗೆ ಕೊಂಡಿಯ್ಯುವ ನಿಟ್ಟಿನಲ್ಲಿ ರೂಪಿಸಿರುವ ಯೋಜನೆಗಳೆಂದು ಜಲಸಂಪನ್ಮೂಲ ಸಚಿವ ಕಾರಜೋಳ ತಿಳಿಸಿದ್ರು.