NationalUncategorized

ಭದ್ರತಾಲೋಪ ಪ್ರಕರಣ; ಫಿರೋಜ್‌ಪುರಕ್ಕೆ ಕೇಂದ್ರ ಗೃಹಸಚಿವಾಲಯದ ತಂಡ ಭೇಟಿ

ಫಿರೋಜ್‌ಪುರ: ಪ್ರಧಾನಿ ನರೇಂದ್ರ ಮೋದಿ ಪಂಜಾಬ್‌ ಭೇಟಿ ವೇಳೆ ಭದ್ರತಾಲೋಪವಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಗೃಹ ಸಚಿವಾಲಯ ತನಿಖೆ ನಡೆಸುತ್ತಿದೆ. ಕೇಂದ್ರ ಗೃಹ ಸಚಿವಾಲಯದ ತಂಡ ಇಂದು ಫಿರೋಜ್‌ಪುರ ಹಾಗೂ ಪ್ರಧಾನಿ ಮೋದಿಗೆ ಅಡ್ಡಿಪಡಿಸಿದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ.

ಕೇಂದ್ರ ಸರ್ಕಾರ ಪ್ರಕರಣದ ತನಿಖೆಗೆ ಮೂವರ ತಂಡವನ್ನು ರಚಿಸಿದೆ. ಅದ್ರಲ್ಲಿ ಭದ್ರತಾ ಕಾರ್ಯದರ್ಶಿ ಸುಧೀರ್‌ ಕುಮಾರ್‌ ಸಕ್ಸೇನಾ, ಇಂಟೆಲಿಜೆನ್ಸ್‌ ಬ್ಯೂರೋ ಜಾಯಿಂಟೆ ಸೆಕ್ರೆಟರಿ ಬಲ್ಬೀರ್‌ ಸಿಂಗ್‌,  ಎಸ್‌ಪಿಜಿ ಐಜಿ ಸುರೇಶ್‌ ಇದ್ದಾರೆ. ಮೂವರೂ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದ್ದು, ಸ್ಥಳೀಯ ಅಧಿಕಾರಿಗಳಿಂದ ಘಟನೆ ಬಗ್ಗೆ ಮಾಹಿತಿ ಪಡೆದಿದ್ದಾರೆ.

ಪಂಜಾಬ್‌ ಡಿಜಿಪಿ ಚಟ್ಟೋಪಾಧ್ಯಾಯ ಹಾಗೂ ಇತರೆ 13 ಹಿರಿಯ ಪೊಲೀಸ್‌ ಅಧಿಕಾರಿಗಳು ಕೂಡಾ ಈ ವೇಳೆ ಉಪಸ್ಥಿತರಿದ್ದು, ಕೇಂದ್ರ ತಂಡಕ್ಕೆ ಜನವರಿ ಐದರಂದು ನಡೆದ ಘಟನೆ ಬಗ್ಗೆ ಮಾಹಿತಿ ನೀಡಿದರು.  ಜನವರಿ ಐದರಂದು ಫಿರೋಜಪುರ್‌ ಬಳಿ ನಡೆಯುತ್ತಿದ್ದ ಸಮಾವೇಶದಲ್ಲಿ ಮೋದಿ ಭಾಗವಹಿಸಬೇಕಿತ್ತು. ರಸ್ತೆ ಮಾರ್ಗದಲ್ಲಿ ಅವರು ಸಂಚರಿಸುತ್ತಿದ್ದಾಗ, ಗುಂಪೊ೦ದು ಅವರ ಕಾರಿಗೆ ಅಡ್ಡಿಪಡಿಸಿತ್ತು. ಇದರಿಂದಾಗಿ, ಮಾರ್ಗ ಮಧ್ಯೆ ಬರುವ ಫ್ಲೈಓವರ್‌ ಮೇಲೆ ಪ್ರಧಾನಿ ಮೋದಿ 20 ನಿಮಿಷಕ್ಕೂ ಹೆಚ್ಚು ಕಾಲ ನಿಂತಿದ್ದರು. ನಂತರ ಕಾರ್ಯಕ್ರಮವನ್ನು ರದ್ದುಗೊಳಿಸಿ, ದೆಹಲಿಗೆ ವಾಪಸ್ಸಾಗಿದ್ದರು.

 

Share Post