HealthNational

ಕೇರಳದಲ್ಲಿ ನಿಫಾ ವೈರಸ್‌ ಸೋಂಕು ಹೆಚ್ಚಳ; 9 ವರ್ಷದ ಬಾಲಕನ ಸ್ಥಿತಿ ಚಿಂತಾಜನಕ

ಬೆಂಗಳೂರು; ಕೇರಳದಲ್ಲಿ ನಿಫಾ ವೈರಸ್‌ ಪ್ರಕರಣಗಳು ಹೆಚ್ಚಾಗುತ್ತಲೇ ಇವೆ. ಈಗಾಗಲೇ ಕೊಯಿಕೋಡಿನಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಇನ್ನು ಸೋಂಕಿತರ ಸಂಖ್ಯೆ ಆರಕ್ಕೇರಿದ್ದು, ಇದರಲ್ಲಿ 9 ವರ್ಷದ ಬಾಲಕನ ಸ್ಥಿತಿ ಚಿಂತಾಜನಕವಾಗಿದೆ. 39 ವರ್ಷದ ವ್ಯಕ್ತಿ ಕೋಯಿಕ್ಕೋಡಿನ ಆಸ್ಪತ್ರೆಯಲ್ಲಿ ತೀವ್ರ ನಿಗಾದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಬಾಂಗ್ಲಾದೇಶದ ರೂಪಾಂತರಿ ನಿಫಾ ವೈರಸ್‌ ಇದಾಗಿದೆ. ಸೋಂಕು ಹರಡುವ ವೇಗ ಈ ರೂಪಾಂತರಿಗೆ ಕಡಿಮೆ ಇರುತ್ತದೆ. ಆದ್ರೆ ಸೋಂಕು ತಗುಲಿದವರಿಗೆ ಜೀವ ಕಳೆದುಕೊಳ್ಳುವ ಅಪಾಯ ಹೆಚ್ಚಿರುತ್ತದೆ. ಕೊಯಿಕ್ಕೋಡಿನಲ್ಲಿ ಸೋಂಕು ಹರಡಿರುವ ಸುಮಾರು 11 ವಾರ್ಡ್‌ಗಳನ್ನು ಕಂಟೈನ್ಮೆಂಟ್‌ ವಲಯ ಅಂತ ಘೋಷಣೆ ಮಾಡಲಾಗಿದೆ. ಜೊತೆಗೆ ನಾಳೆ ಶಾಲೆಗಳಿಗೆ ಘೋಷಣೆ ಮಾಡಲಾಗಿದೆ.

 

Share Post