ಶ್ರೀಹರಿಕೋಟಾದಿಂದ ಆದಿತ್ಯ ಎಲ್-1 ಉಡಾವಣೆ
ಶ್ರೀಹರಿಕೋಟಾ; ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹಾಕಾಶ್ಯ ಕೇಂದ್ರದಿಂದ ಆದಿತ್ಯ ಎಲ್-೧ ಉಪಗ್ರಹವನ್ನು ಉಡಾವಣೆ ಮಾಡಲಾಗಿದೆ. ಇದು ಸೂರ್ಯನ ಐದು ಲ್ಯಾಂಗ್ರೇಜ್ ಪಾಯಿಂಟ್‌ಗಳಲ್ಲಿ ಪಾಯಿಂಟ್-1ರಲ್ಲಿ ಸ್ಥಾಪಿಸಲಾಗುತ್ತದೆ. ಸೂರ್ಯನ ಬಗ್ಗೆ ಅಧ್ಯಯನ ನಡೆಸಲು ಇದು ಸಹಕಾರಿಯಾಗುತ್ತದೆ.
ಆದಿತ್ಯ ಎಲ್-೧ ಉಪಹಗ್ರಹವನ್ನು ಹೊತ್ತ PSLV-XLC57 ರಾಕೆಟ್ ನಿಗದಿತ ಕಕ್ಷೆಯಲ್ಲಿ ಸಂಚರಿಸುತ್ತಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ರಾಕೆಟ್ 1 ಮತ್ತು 2ನೇ ಹಂತದಲ್ಲಿ ಯಶಸ್ವಿಯಾಗಿ ಬೇರ್ಪಟ್ಟಿದೆ ಎಂದೂ ವಿಜ್ಞಾನಿಗಳು ಮಾಹಿತಿ ನೀಡಿದ್ದಾರೆ.
ಪಿಎಸ್‌ಎಲ್‌ವಿ-ಸಿ57 ರಾಕೆಟ್ ಮೂಲಕ ಆದಿತ್ಯ ಎಲ್-೧ ಉಪಗ್ರಹವನ್ನು ಉಡಾವಣೆ ಮಾಡಲಾಗಿದೆ. ಭೂಮಿಯಿಂದ 15 ಲಕ್ಷ ಕಿಲೋ ಮೀಟರ್ ದೂರದಲ್ಲಿರುವ ಲ್ಯಾಂಗ್ರೇಜ್ ಪಾಯಿಂಟ್-1 ರಲ್ಲಿ ಬಾಹ್ಯಾಕಾಶ ನೌಕೆಯನ್ನು ಇರಿಸಲಾಗುತ್ತದೆ. ಇಲ್ಲಿಂದ ಭಾರತ ನಿರಂತರವಾಗಿ ಸೂರ್ಯನ ಮೇಲೆ ಕಣ್ಣಿಡಲಿದೆ.