CrimeUncategorized

200ಕೋಟಿ ಹಣ ವಂಚನೆ ಕೇಸ್‌: ನಟಿ ಜಾಕ್ವೆಲಿನ್‌ ವಿಚಾರಣೆ

ದೆಹಲಿ: ಉದ್ಯಮಿಗಳಿಗೆ ಬೆದರಿಕೆ ಹಾಕಿ ಸುಮಾರು 200ಕೋಟಿ ವಂಚನೆ ಮಾಡಿರುವ ಸುಕೇಶ್‌ ಚಂದ್ರಶೇಖರ್‌ ಕೇಸ್‌ಗೆ ಸಂಬಂಧಿಸಿದಂತೆ ನಟಿ ಜಾಕ್ವೆಲಿನ್‌ ಫರ್ನಾಂಡಿಸ್‌ರನ್ನು ಇಡಿ ವಿಚಾರಣೆಗೊಳಪಡಿಸಿದೆ. ಬುಧವಾರ ದೆಹಲಿಯಲ್ಲಿರುವ ಜಾರಿ ನಿರ್ದೇಶನಾಲಯದಲ್ಲಿ ನಟಿಯ ವಿಚಾರಣೆ ನಡಿದಿದೆ. ಅಷ್ಟೆ ಅಲ್ಲದೆ ಈ ವಿಚಾರದಲ್ಲಿ ಜಾಕ್ವೆಲಿನ್‌ಗೆ ಇಡಿ ಭಾನುವಾರದಿಂದ ಲುಕ್‌ಔಟ್‌ ನೋಟೀಸ್‌ ಸಹ ಜಾರಿ ಮಾಡಿದೆ. ಮೊನ್ನೆಯಷ್ಟೆ ವಿದೇಶಕ್ಕೆ ಹೊರಡಲು ಸಿದ್ದವಾಗಿದ್ದ ನಟಿಯನ್ನು ಏರ್ಪೋರ್ಟ್‌ ಅಧಿಕಾರಿಗಳು ವಾಪಸ್‌ ಕಳುಹಿಸಿದ್ದರು.

Share Post