ಬಯಲಾಯ್ತು ಈ ಅಕ್ಕ-ತಮ್ಮನ ಖತರ್ನಾಕ್ ಕೆಲಸ..!; ಮನೆಗಳಿಗೆ ಕನ್ನ ಹಾಕೋದ್ರಲ್ಲಿ ಇವ್ರು ಎಕ್ಸ್ಪರ್ಟ್ಸ್!
ಬೆಂಗಳೂರು; ಆಕೆ ಅಕ್ಕ, ಇವನು ತಮ್ಮ.. ಇಬ್ಬರೂ ಭಾರಿ ಕಿಲಾಡಿಗಳು… ಕೊಂಚ ಅವಕಾಶ ಸಿಕ್ರೆ ಸಾಕು ಮನೆಗೆ ಕನ್ನ ಹಾಕಿ ಮನೆಯಲ್ಲಿದ್ದ ಚಿನ್ನಾಭರಣಗಳನ್ನೆಲ್ಲಾ ದೋಚುತ್ತಿದ್ದರು.. ಇವ್ರು ಒಂದು ರೀತಿಯಲ್ಲಿ ಕಿಟಕಿ ಕಳ್ಳರು.. ಕಿಟಕಿ ಸರಳುಗಳನ್ನು ಸುಲಭವಾಗಿ ಮುರಿದು ಕಳ್ಳತನ ಮಾಡಿಕೊಂಡು ಹೋಗುತ್ತಿದ್ದರು.. ಇದೀಗ ಕೊನೆಗೂ ಬೆಂಗಳೂರಿನ ಬಸವೇಶ್ವರ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ..
ಬಾಗಿಲು ಹಾಕಿರುವ ಮನೆ ಹಾಗೂ ಅಂಗಡಿಗಳನ್ನು ಗುರುತಿಸುತ್ತಿದ್ದ ಈ ಅಕ್ಕ, ತಮ್ಮ, ಅದರ ಕಿಟಕಿಗಳ ಮೂಲಕ ಒಳನುಗ್ಗುತ್ತಿದ್ದರು.. ಯಾರಿಗೂ ತಿಳಿಯದಂತೆ ಕಳ್ಳತನ ಮಾಡಿಕೊಂಡು ಎಸ್ಕೇಪ್ ಆಗುತ್ತಿದ್ದರು.. ಆನಂದ್ ಹಾಗೂ ಗಾಯತ್ರಿ ಬಂಧಿತ ಆರೋಪಿಗಳು.. ಇವರು ಕಳ್ಳತನ ಮಾಡಿ ಅದ್ರಲ್ಲಿ ಬಂದ ಹಣದಿಂದ ಗೋವಾ ಟ್ರಿಪ್ ಹೊಡೆಯುತ್ತಿದ್ದರು.. ಕಳ್ಳತನ ಮಾಡೋದು ಟ್ರಿಪ್ ಹೋಗಿ ಮಜಾ ಮಾಡೋದು.. ಇಷ್ಟೇ ಅವರ ಕೆಲಸವಾಗಿತ್ತು..
ಬಸವೇಶ್ವರ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕೂಡಾ ಒಂದು ಕಳ್ಳತನ ನಡೆದಿತ್ತು.. ಡಯಾಗ್ನಾಸ್ಟಿಕ್ ಸೆಂಟರ್ನ ಕಿಟಕಿಯ ಎಕ್ಸಾಸ್ಟಿಂಗ್ ಫ್ಯಾನ್ ಬಿಚ್ಚಿ ಒಳಗೆ ನುಗ್ಗಿದ್ದರು. ಅಂಗಡಿಯಲ್ಲಿದ್ದ 8 ಲಕ್ಷ 20 ಸಾವಿರ ನಗದನ್ನು ಎಗರಿಸಿ ಪರಾರಿಯಾಗಿದ್ದರು. ಇದರಲ್ಲಿ ತಮ್ಮ 3 ಲಕ್ಷ ಹಾಗೂ ಅಕ್ಕ 5 ಲಕ್ಷ ರೂಪಾಯಿ ಹಂಚಿಕೊಂಡಿದ್ದರು.. ಪೊಲೀಸರು ಕೊನೆಗೂ ಆರೋಪಿಗಳನ್ನು ಬಂಧಿಸಿದ್ದು, ಬಂಧಿತರಿಂದ 4 ಲಕ್ಷದ 50 ಸಾವಿರ ಹಣ ಹಾಗೂ ಒಂದು ಇಂಡಿಗೋ ಕಾರನ್ನು ವಶಪಡಿಸಿಕೊಂಡಿದ್ದಾರೆ..
ಇವರಿಬ್ಬರೂ 15ಕ್ಕೂ ಹೆಚ್ಚು ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದರು ಎಂದು ತಿಳಿದುಬಂದಿದೆ..