InternationalUncategorized

ಅಕ್ರಮವಾಗಿ ಚಿನ್ನ ರವಾನೆ; ಮುಂಬೈನಲ್ಲಿ 4 ಕೆಜಿ ಬಂಗಾರ ವಶ..!

ಮುಂಬೈ: ವಿದೇಶಗಳಿಂದ ಅಕ್ರಮವಾಗಿ ಚಿನ್ನವನ್ನು ಭಾರತಕ್ಕೆ ಸಾಗಾಟ ಮಾಡುತ್ತಿದ್ದ ಜಾಲವನ್ನು ಮುಂಬೈ ವಿಮಾನ ನಿಲ್ದಾಣದ ಕಸ್ಟಮ್ಸ್‌ ಅಧಿಕಾರಿಗಳು ಭೇದಿಸಿದ್ದಾರೆ. ಕಾಫಿ ಫ್ಲಾಸ್ಕ್‌, ಚಪ್ಪಲಿ ಹಾಗೂ ಹೇರ್‌ ಕ್ಲಿಪ್‌ಗಳಲ್ಲಿ ಚಿನ್ನವನ್ನು ಬಚ್ಚಿಟ್ಟು ಭಾರತಕ್ಕೆ ತರಲಾಗಿತ್ತು. ತೆರಿಗೆ ಕಟ್ಟದೆ ಅಕ್ರಮವಾಗಿ ಚಿನ್ನವನ್ನು ತಂದಿದ್ದವರು ತಪಾಸಣೆ ವೇಳೆ ಸಿಕ್ಕಿಬಿದ್ದಿದ್ದಾರೆ.

ಈ ಸಂಬಂಧ ಮುಂಬೈ ವಿಮಾನ ನಿಲ್ದಾಣದ ಕಸ್ಟಮ್ಸ್‌ ಅಧಿಕಾರಿಗಳು ಕೀನ್ಯಾ ಮೂಲದ 18 ಮಹಿಳೆಯರನ್ನು ಬಂಧಿಸಿದ್ದಾರೆ. ಬಂಧಿತ ಮಹಿಳೆಯರು, ಒಳ ಉಡುಪಿನಲ್ಲಿ ಚಿನ್ನ ಸಾಗಾಟ ಮಾಡುತ್ತಿದ್ದಳೆಂದು ಗೊತ್ತಾಗಿದೆ.  ಎಲ್ಈಲರೂ ಶಾರ್ಜಾದಿಂದ ಚಿನ್ನವನ್ನು ತರುತ್ತಿದ್ದರೆಂದು ಗೊತ್ತಾಗಿದೆ.

Share Post