CinemaCrimeInternational

ನಟಿ ಗಾಯತ್ರಿ ಜೋಶಿ ಕಾರು ಅಪಘಾತ; ವೃದ್ಧ ದಂಪತಿ ಸಾವು..!

ಬೆಂಗಳೂರು; ಬಾಲಿವುಡ್ ಖ್ಯಾತ ನಟಿ ಗಾಯತ್ರಿ ಜೋಶಿ ಮತ್ತು ಅವರ ಪತಿ ವಿಕಾಸ್ ಒಬೆರಾಯ್ ಅವರಿದ್ದ ಕಾರು ಅಪಘಾತಕ್ಕೀಡಾಗಿದೆ. ಇಟಲಿಯಲ್ಲಿ ಕಾರು ಅಪಘಾತವಾಗಿದ್ದು, ಘಟನೆಯಲ್ಲಿ ವೃದ್ಧ ದಂಪತಿಯೊಬ್ಬರು ಸಾವನ್ನಪ್ಪಿದ್ದಾರೆ ಎಂದು ಹೇಳಲಾಗುತ್ತಿದೆ,

ಈ ಬಗ್ಗೆ ಸ್ವತಃ ನಟಿ ಗಾಯತ್ರಿ ಜೋಶಿ ಅವರೇ ಮಾಹಿತಿ ಹಂಚಿಕೊಂಡಿದ್ದಾರೆ. ಇಟಲಿಯಲ್ಲಿ ಸರಣಿ ಅಪಘಾತ ನಡೆದಿದ್ದು, ನಾನು ಸುರಕ್ಷಿತವಾಗಿದ್ದೇನೆ ಎಂದು ನಟಿ ಹೇಳಿಕೊಂಡಿದ್ದಾರೆ.

ಸರಣಿ ಅಪಘಾತದ ಮೇಲೆ ಫೆರಾರಿ ಕಾರಿಗೆ ಬೆಂಕಿ ಬಿದ್ದಿದ್ದು, ಸ್ವಿಸ್‌ ದಂಪತಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.

 

Share Post