ಫಿಟ್ನೆಸ್ ಹುಚ್ಚು-12ನೇ ಅಂತಸ್ತಿನಿಂದ ನೇತಾಡುತ್ತಾ ವ್ಯಾಯಾಮ, ವಿಡಿಯೋ ವೈರಲ್
ಫರಿದಾಬಾದ್: ಯಾವುದಕ್ಕಾದರೂ ಒಂದು ಮಿತಿ ಅಂತ ಇರುತ್ತೆ..ಅತಿಯಾದ್ರೆ ಅಮೃತ ಕೂಡ ವಿಷ ಅಂತಾರೆ. ಇತ್ತೀಚೆಗೆ ಜನಕ್ಕೆ ಫಿಟ್ನೆಸ್ ಹುಚ್ಚು ಹೆಚ್ಚಾಗೆ ಹಿಡಿದಿದೆ. ಪುರುಷರು, ಮಹಿಳೆಯರು ಎಂಬ ಭೇದ-ಭಾವವಿಲ್ಲದೆ ವ್ಯಾಯಾಮ ಮಾಡ್ತಾರೆ. ಫಿಟ್ನೆಸ್ ಮಾಡೋಕ್ಕಂತಾನೆ ಒಂದು ರೀತಿ ನೀತಿ ಇರುತ್ತೆ. ಆದರೆ ಕೆಲವರು ಅದನ್ನು ದಾಟಿ ಹುಚ್ಚರ ಹಾಗೆ ಪ್ರಾಣಕ್ಕೆ ಕಂಟಕ ತಂದುಕೊಳ್ಳುವ ಕೆಲಸಗಳನ್ನು ಮಾಡ್ತಾರೆ. ಜಿಮ್‌ನಲ್ಲಿ ಭಾರವಾದ ವಸ್ತು ಎತ್ತಿ ಹೃದಯಾಘಾತದಿಂದ ಸಾವನ್ನಪ್ಪುವವರ ಸಂಖ್ಯೆ ಒಂದೆಡೆ ಆದ್ರೆ ಈ ವಿಡಿಯೋದಲ್ಲಿರುವಂತೆ ಅತಿರೇಖಕ್ಕೆ ಹೋಗಿ ಜೀವ ಕಳೆದುಕೊಳ್ಳುವವರು ಇನ್ನೊಂದು ಕಡೆ.
ಫಿಟ್ನೆಸ್ ಕಾಪಾಡಿಕೊಳ್ಳಲು ಈ ವ್ಯಕ್ತಿ ಮಾಡಿರುವ ಕೆಲಸ ನೋಡ್ರೀ ಹೀಗಿದೆ. 12ನೇ ಮಹಡಿಯಿಂದ ಯಾವುದೇ ಭಯವಿಲ್ಲದೆ ವ್ಯಾಯಾಮ ಮಾಡ್ತಿದಾರೆ. ಬಹುಮಹಡಿ ಕಟ್ಟಡದ ಮೇಲಿನಿಂದ ಗ್ರಿಲ್ ಹಿಡಿದು ಇನ್ನೊಂದು ಕಡೆಗೆ ಜಿಗಿದು ಸಿಟ್ ಅಪ್ಸ್ ಮಾಡಿದ್ದಾರೆ. ಈ ರೀತಿಯ ಭಯಂಕರ ವ್ಯಾಯಾಮ ಹಿಂದೆಂದೂ ನೋಡಿಲ್ಲ ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ. ಸದ್ಯ ವ್ಯಕ್ತಿಯ ಇ ವಿಡಿಯೋ ಎಲ್ಲೆಡೆ ವೈರಲ್ ಆಗಿದ್ದು, ನೋಡುಗರು ಆಶ್ಚರ್ಯಚಕಿತರಾಗಿದ್ದಾರೆ.
ಕೆಲ ದಿನಗಳ ಹಿಂದೆ ಫರಿದಾಬಾದ್‌ನಲ್ಲಿ ಕೆಳಗೆ ಬಿದ್ದಿದ್ದ ಬಟ್ಟೆ ತೆಗೆಯಲಿ ಮಗುವಿಗೆ ಬಟ್ಟೆ ಕಟ್ಟಿ ಕೆಳಗೆ ಬಿಟ್ಟಿದ್ದ ವೈರಲ್ ಆಗಿತ್ತು. 10ನೇ ಮಹಡಿಯಿಂದ 9ನೇ ಮಹಡಿಗೆ ಸೀರೆ ಕಟ್ಟಿಕೊಂಡು ನಂತರ ಮೇಲಕ್ಕೆ ಎಳೆಯಲಾಗಿತ್ತು. ಈ ವಿಡಿಯೋವನ್ನು ಎದುರಿನ ಅಪಾರ್ಟ್‌ಮೆಂಟ್‌ನಲ್ಲಿದ್ದವರು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ್ರು.