Uncategorized

ಹೆಲಿಕಾಪ್ಟರ್‌ ದುರಂತ – ಕೊನೆಯುಸಿರೆಳೆದ ಬಿಪಿನ್‌ ರಾವತ್‌

ತಮಿಳುನಾಡು : ವಾಯುಪಡೆಯ ಹೆಲಿಕಾಪ್ಟರ್‌ ಪತನವಾಗಿದೆ. ಹೆಲಿಕಾಪ್ಟರ್‌ ಅಲ್ಲಿ ಪ್ರಯಾಣಿಸುತ್ತಿದ್ದ ಭಾರತೀಯ ಸೇನೆಯ ರಕ್ಷಣಾ ಮುಖ್ಯಸ್ಥ ಬಿಪಿನ್‌ ರಾವತ್‌ ಅವರು ಕೂಡ ಕೊನೆಯುಸಿರೆಳೆದಿದ್ದಾರೆ. ಸೇನಾ ಕಾಲೇಜಿನಲ್ಲಿ ಭಾಷಣದ ನಿಮಿತ್ತ ಬಿಪಿನ್‌ ರಾವತ್‌ ತೆರಳುತ್ತಿದ್ದರು. 13 ಜನರು ಮೃತಪಟ್ಟರೆ ಬಿಪಿನ್‌ ರಾವತ್‌ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಬಿಪಿನ್‌ ರಾವತ್‌ ಕೊನೆಯುಸಿರೆಳೆದಿದ್ದಾರೆ.

ಬಿಪಿನ್ ರಾವತ್ ಅವರು 1958 ಮಾರ್ಚ್‌ 16ರಂದು ಉತ್ತರಾಖಂಡದ ಪೌರಿಯಲ್ಲಿ ಹಿಂದೂ ಗರ್ವಾಲಿ ರಜಪೂತ ಕುಟುಂಬದಲ್ಲಿ ಜನಿಸಿದ್ದರು. ಬಿಪಿನ್‌ ರಾವತ್‌ ಅವರ ತಂದೆ ಲಕ್ಷ್ಮಣ್‌ ಸಿಂಗ್‌ ರಾವತ್‌. ಅವರೂ ಕೂಡ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ್ದರು. ಬಿಪಿನ್ ರಾವತ್ ಅವರು ಡೆಹ್ರಾಡೂನ್‌ನಲ್ಲಿರುವ ಕ್ಯಾಂಬ್ರಿಯನ್ ಹಾಲ್ ಸ್ಕೂಲ್ ಮತ್ತು ಶಿಮ್ಲಾದ ಸೇಂಟ್ ಎಡ್ವರ್ಡ್ಸ್ ಸ್ಕೂಲ್‌ನಲ್ಲಿ ವ್ಯಾಸಂಗ ಮಾಡಿದ್ದರು, ನಂತರ ಅವರು ನ್ಯಾಷನಲ್ ಡಿಫೆನ್ಸ್ ಅಕಾಡೆಮಿ ಮತ್ತು ಇಂಡಿಯನ್ ಮಿಲಿಟರಿ ಅಕಾಡೆಮಿಗೆ ಸೇರಿದ್ದರು, ಅಲ್ಲಿ ಅವರಿಗೆ ‘ಸ್ವರ್ಡ್ ಆಫ್ ಹಾನರ್’ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿತ್ತು.

2011 ರಲ್ಲಿ, ಚೌಧರಿ ಚರಣ್ ಸಿಂಗ್ ವಿಶ್ವವಿದ್ಯಾನಿಲಯ, ಮೀರತ್‌ನಿಂದ ಅವರು ಮಿಲಿಟರಿ-ಮಾಧ್ಯಮ ಕಾರ್ಯತಂತ್ರದ ಅಧ್ಯಯನಗಳ ಸಂಶೋಧನೆಗಾಗಿ ಡಾಕ್ಟರೇಟ್ ಆಫ್ ಫಿಲಾಸಫಿಯನ್ನು ನೀಡಿದ್ದರು.

ಹೆಲಿಕಾಪ್ಟರ್‌ ದುರಂತದಿಂದ ಬಿಪಿನ್‌ ರಾವತ್‌ ಇಂದು ನಮ್ಮನ್ನು ಅಗಲಿದ್ದಾರೆ. ಒಟ್ಟು ೧೪ಜನ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್‌ ಸಂಪೂರ್ಣವಾಗಿ ಸುಟ್ಟು ಕರುಕಲಾಗಿದೆ.

Share Post