ಪ್ರಧಾನಿ ನರೇಂದ್ರ ಮೋದಿ ಭೇಟಿ ಮಾಡಿದ ಆಫ್ಗನ್ ಸಿಖ್ ಹಾಗೂ ಹಿಂದೂ ಮುಖಂಡರ ನಿಯೋಗ
ದೆಹಲಿ: ತಾಲಿಬಾನ್ ಕಬಂದ ಬಾಹುಗಳಲ್ಲಿ ಸಿಕ್ಕಿಕೊಂಡ ಅಫ್ಗಾನ್‌ನಿಂದ ಸಿಖ್ಖರು ಹಾಗೂ ಹಿಂದುಗಳನ್ನು ಸುರಕ್ಷಿತವಾಗಿ ಭಾರತಕ್ಕೆ ಕರೆತಂದ ಹಿನ್ನೆಲೆ ಸಿಖ್ ಮುಖಂಡರು ಪ್ರಧಾನಿ ನರೇಂದ್ರ ಮೋದಿಯವರನ್ನು ನಿನ್ನೆ ಭೇಟಿ ಮಾಡಿ ಧನ್ಯವಾದ ತಿಳಿಸಿದ್ರು. ದೆಹಲಿಯಲ್ಲಿನ ಲೋಕ್ ಕಲ್ಯಾಣ್ ಮಾರ್ಗದಲ್ಲಿರುವ ಪ್ರಧಾನಿ ನಿವಾಸದಲ್ಲಿ ಮೋದಿ ಅವರನ್ನು ಭೇಟಿ ಮಾಡಿದರು. ಸಿಖ್-ಹಿಂದೂ ನಿಯೋಗವೊಂದು ಪ್ರಧಾನಿ ಮೋದಿ ಅವರಿಗೆ ಜ್ಞಾಪಕ ಪತ್ರವನ್ನು ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರು ಸಿಖ್ ನಿಯೋಗಕ್ಕೆ ಭಾರತದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಪ್ರಾಮುಖ್ಯತೆ ಮತ್ತು ಅದರ ಪ್ರಯೋಜನಗಳ ಕುರಿತು ವಿವರಣೆ ನೀಡಿದ್ರು.
ಕಳೆದ ವರ್ಷ ಅಫ್ಘಾನಿಸ್ತಾನದಿಂದ ಭಾರತಕ್ಕೆ ಬಂದಿದ್ದ ನಿದನ್ ಸಿಂಗ್ ಸಚ್ ದೇವ್ ಅವರು ಪ್ರಧಾನಿ ಮೋದಿ ಅವರಿಗೆ ವಿಶೇಷ ಧನ್ಯವಾದಗಳನ್ನು ತಿಳಿಸಿದ್ರು.. ಅಫ್ಘಾನಿಸ್ತಾನದ ಗುರುದ್ವಾರದಲ್ಲಿ ತಾಲಿಬಾನ್‌ಗಳು ತನ್ನನ್ನು ಅಪಹರಿಸಿದ್ರು ಜೊತೆಗೆ ನನ್ನನ್ನು ಭಾರತೀಯ ಗೂಢಚಾರ ಎಂದು ಪರಿಗಣಿಸಿ ಮತಾಂತರಗೊಳ್ಳುವಂತೆ ತಾಲಿಬಾನ್‌ಗಳು ಒತ್ತಡ ಹೇರಿದ್ದರು.
“ನಮ್ಮನ್ನು ರಕ್ಷಿಸಿದ ಪ್ರಧಾನಿ ಮೋದಿಯವರಿಗೆ ಧನ್ಯವಾದಗಳು. ಭಾರತದ ನೆರವಿನಿಂದ ನಾವು ಸಂತೋಷವಾಗಿದ್ದೇವೆ” ಎಂದು ನಿದಾನ್ ಸಿಂಗ್ ಸಚ್‌ದೇವ್ ಹೇಳಿದ್ದಾರೆ. ಆಫ್ಗನ್‌ನಿಂ ಬಂದಿರುವ ಪ್ರಜೆಗಳಿಗೆ ಇಲ್ಲಿ ವಾಸಿಸಲು ಪೌರತ್ವ ನೀಡುವಂತೆ ಮನವಿ ಮಾಡಿಕೊಂಡರು.
ಅಫ್ಘಾನ್ ಸಿಖ್ ಪ್ರತಿನಿಧಿಗಳೊಂದಿಗೆ ಮಾತನಾಡಿದ ಪ್ರಧಾನಿ ಮೋದಿ, ಗುರು ಗ್ರಂಥ ಸಾಹಿಬ್ ಅವರನ್ನು ಗೌರವಿಸುವ ಸಂಪ್ರದಾಯದ ಮಹತ್ವವನ್ನು ನೆನಪಿಸಿಕೊಂಡರು. ಪ್ರಧಾನಿ ಮೋದಿ ಅವರು ಕಾಬೂಲ್‌ಗೆ ಹೋದಾಗ ಸಿಖ್ಖರು ತೋರಿದ ಪ್ರೀತಿ ಬಗ್ಗೆ ಸ್ಮರಿಸಿದರು. ಸಿಖ್ ಸಮುದಾಯವನ್ನು ಸದಾ ಬೆಂಬಲಿಸುವುದಾಗಿ ಮತ್ತು ಅವರ ಸಮಸ್ಯೆಗಳನ್ನು ಪರಿಹರಿಸಲು ಶ್ರಮಿಸುವುದಾಗಿ ಮೋದಿ ಭರವಸೆ ನೀಡಿದ್ದಾರೆ.