Uncategorized

ಬಿಡಿಎ ಬ್ರೋಕರ್‌ ಮನೆಯಲ್ಲಿ 5 ಕೆಜಿ ಚಿನ್ನ ಪತ್ತೆ; ಇನ್ನೂ ಏನು ಸಿಕ್ತು ಗೊತ್ತಾ..?

ಬೆಂಗಳೂರು: ಎಸಿಬಿ ಅಧಿಕಾರಿಗಳು ಬಿಡಿಎನ 9 ಮಧ್ಯವರ್ತಿಗಳ ಮನೆಗಳ ಮೇಲೆ ಇಂದು ದಾಳಿ ನಡೆಸಿದ್ದು, ಇವರ ನಿವಾಸಗಳಲ್ಲಿ ಅಪಾರ ಪ್ರಮಾಣದ ಚಿನ್ನ, ಬೆಳ್ಳಿ ವಸ್ತುಗಳು ಪತ್ತೆಯಾಗಿವೆ. ಆರ್‌.ಟಿ.ನಗರದ ಮನೋರಾಯನಪಾಳ್ಯದ ಬಿಡಿಎ ಬ್ರೋಕರ್ ಮೋಹನ್‌ ಮನೆಯಲ್ಲಿ ಸುಮಾರು ಐದು ಕೆಜಿಯಷ್ಟು ಚಿನ್ನ ಸಿಕ್ಕಿದೆ. 

ಮೋಹನ್‌ ನಿವಾಸದಲ್ಲಿ ಎಸಿಬಿ ಅಧಿಕಾರಿಗಳು ಪರಿಶೀಲನೆ ನಡೆಸಿದಾಗ, 4.960 ಕೆಜಿ ಚಿನ್ನ,‌ 15 ಕೆಜಿ ಬೆಳ್ಳಿ, 61.9 ಗ್ರಾಂ ಡೈಮಂಡ್ ಪತ್ತೆಯಾಗಿದೆ. ಇನ್ನು ಮಲ್ಲತ್ತಹಳ್ಳಿಯಲ್ಲಿರುವ ಮುನಿರತ್ನ ಮನೆ ಮೇಲೆ ಎಸಿಬಿ ದಾಳಿ ನಡೆಸಿದ್ದು, ಮನೆಯೊಳಗೆ ಪ್ರವೇಶಿಸುತ್ತಿದ್ದಂತೆ ಒಂದು ಕ್ಷಣ ಅಧಿಕಾರಿಗಳೇ ದಂಗಾಗಿದ್ದಾರೆ. ಐಷರಾಮಿ‌ ಮನೆಯೊಳಗೆ ಸಿಮ್ಮಿಂಗ್ ಪುಲ್, ದುಬಾರಿಗೆ ಗ್ರಾನೈಟ್, ಪೀಠೋಪರಣಗಳು ಹಾಗೂ ಹೋಮ್ ಥಿಯೇಟರ್ ಇರುವುದು ಗೊತ್ತಾಗಿದೆ.

ಇತ್ತ ದೊಮ್ಮಲೂರಿನಲ್ಲಿರುವ ಬಿಡಿಎ ಬ್ರೋಕರ್ ಮನೋಜ್ ಮನೆಯಲ್ಲಿ ಐಷಾರಾಮಿ ಗಾಗಲ್ಸ್ ಮತ್ತು ವಾಚ್‌ಗಳು ಪತ್ತೆಯಾಗಿವೆ. ಲಕ್ಷಾಂತರ ಮೌಲ್ಯದ 19 ಗಾಗಲ್, ರೋಲೆಕ್ಸ್, ಫಾಸೀಲ್, ಫಾಸ್ಟ್ ಟ್ರಾಕ್ ಸೇರಿ ಹಲವು ಕಂಪನಿಯ 20 ವಾಚ್‌ಗಳಿದ್ದು, ಇದ್ರಲ್ಲಿ ಬಂಗಾರದ ವಾಚ್‌ಗಳು ಕೂಡಾ ಇವೆ ಎಂದು ಹೇಳಲಾಗಿದೆ.

ಇನ್ನು ತೇಜಸ್ವಿ ಕೋಟ್ಯಂತರ ಮೌಲ್ಯದ ಬಂಗಲೆ ಮಾಲೀಕರಾಗಿದ್ದಾರೆ. ಆರ್‌ಆರ್ ನಗರದ ತೇಜಸ್ವಿ ಬಂಗಲೆ ತಮಿಳುನಾಡಿನ ಮಾಜಿ ಮಂತ್ರಿಯವರದ್ದು ಎನ್ನಲಾಗಿದೆ. ತಮಿಳುನಾಡಿನ ಡಿಎಂಕೆಯ ಮಾಜಿ ಮಂತ್ರಿ ದಿವಂಗತ ವೀರಪಾಂಡಿಯನ್ ಆರುಮುಗಂ ಮಗಳಿಂದ 14 ಕೋಟಿಗೆ ಬಂಗಲೆ ಖರೀದಿಸಿದ್ದರು ಎನ್ನಲಾಗಿದೆ.

Share Post