ಮೇಕೆದಾಟು ವಿಚಾರದಲ್ಲಿ ತಮಿಳುನಾಡು ಕಾಲು ಕರೆದುಕೊಂಡು ಬರ್ತಿದೆ..ಅದನ್ನು ಸಹಿಸಿಕೊಳ್ಳೋದಿಲ್ಲ-ಸಿದ್ದರಾಮಯ್ಯ
ಬೆಂಗಳೂರು: ಮೇಕೆದಾಟು ಯೋಜನೆ ಬಗ್ಗೆ ತಮಿಳುನಾಡು ಸರ್ಕಾರದ ನಿರ್ಣಯದ ವಿರುದ್ಧ ರಾಜ್ಯ ವಿಧಾನಸಭೆಯಲ್ಲಿ ಚರ್ಚೆನಡೆಯುತ್ತಿದೆ. ಈ ಬಗ್ಗೆ ಶೂನ್ಯವೇಳೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಮಾತನಾಡಿದ್ದಾರೆ. ತಮಿಳುನಾಡು ಸರ್ಕಾರದಿಂದ ಮೇಕೆದಾಟು ಯೋಜನೆಗೆ ಅಡ್ಡಗಾಲು ಹಾಕುತ್ತಿದೆ. ಈ ಯೋಜನೆ ಬಗ್ಗೆ ಸುಖಾಸುಮ್ಮನೆ ಕಾನೂನು ಬಾಹಿರ ನಿರ್ಣಯವನ್ನು ಮಾಡಿದ್ದಾರೆ.ಅವರು ಮಾಡಿರುವ ಕಾನೂನು ಬಾಹಿರ ನಿರ್ಣಯಕ್ಕೆ ಕಾನೂನಾತ್ಮಕ ಹಕ್ಕಿಲ್ಲ ಎಂದಿದ್ದಾರೆ.
ತಮಿಳುನಾಡು ರಾಜಕೀಯ ಕ್ಯಾತೆ ತೆಗೆಯಲು ಹೀಗೆ ಮಾಡುತ್ತಿದೆ. 2018ರಲ್ಲಿ ಸುಪ್ರೀಂಕೋರ್ಟ್‌ನಿಂದ ಅಂತಿಮ ತೀರ್ಪು ಬಂದಿದೆ. ಸುಪ್ರೀಂಕೋರ್ಟ್ ತೀರ್ಪನ್ನು ನಾವು, ಅವರೂ ಸೇರಿ ಒಪ್ಪಿಕೊಂಡಿದ್ದೇವೆ. ಪ್ರತಿವರ್ಷ 177.25ಟಿಎಂಸಿ ನೀರು ಅವರಿಗೆ ಕೊಡಬೇಕು ಅದರಲ್ಲಿ ಹೆಚ್ಚುವರಿಯಾಗಿ 7-8ವರ್ಷಗಳಲ್ಲಿ 582ಟಿಎಂಸಿ ನೀರು ತಮಿಳುನಾಡಿಗೆ ಹರಿದಿದೆ. ಕಾಲು ಕರೆದುಕೊಂಡು ಬಂದರೆ ಕನ್ನಡಿಗರು ಸಹಿಸಿಕೊಳ್ಳಬೇಕಾ..?ಕೇಂದ್ರ ಸರ್ಕಾರದ ಬಳಿ ಸರ್ವಪಕ್ಷ ನಿಯೋಗ ಹೋಗೋಣ ಎರಡೂ ಸದನಗಳಲ್ಲಿ ನಿರ್ಣಯ ಮಾಡೋಣ ಎಂದು ಸಿದ್ದರಾಮಯ್ಯ ಚರ್ಚೆ ಮಾಡಿದ್ರು.