National

ಗಡಿಯಲ್ಲಿ ಮೂವರು ಉಗ್ರರ ಹತ್ಯೆ: ಡ್ರೋಣ್‌ ವಶ

ಜಮ್ಮು-ಕಾಶ್ಮೀರ: ಇವತ್ತೂ ಕೂಡಾ ಉಗ್ರರ ಕಾರ್ಯಾಚರಣೆ ನಡೆದಿದೆ. ಇಂದು ಬೆಳ್ಳಂಬೆಳಗ್ಗೆ ಮೂವರು ಉಗ್ರರನ್ನು ಭಾರತೀಯ ಸೇನೆ ಹೊಡೆದುರುಳಿಸಿದೆ. ಬದ್ಗಾಮ್‌ ಪ್ರಾಂತ್ಯದಲ್ಲಿ ಈ ಕಾರ್ಯಾಚರಣೆ ನಡೆಸಲಾಗಿದೆ ಎಂದು ತಿಳಿದುಬಂದಿದೆ. ಉಗ್ರರು ಹಾಗೂ ಭಾರತೀಯ ಸೇನೆ ನಡುವೆ ಗುಂಡಿನ ಚಕಮಕಿ ನಡೆದಿದ್ದು, ಮೂವರು ಉಗ್ರರು ಹತರಾಗಿದ್ದಾರೆ. ಇದ್ರಲ್ಲಿ ಒಬ್ಬ ಪಾಕಿಸ್ತಾನಿಯಾಗಿದ್ದು, ಮತ್ತಿಬ್ಬರು ಉಗ್ರರು ಸ್ಥಳೀಯರೆಂದು ತಿಳಿದುಬಂದಿದೆ.

ನಿನ್ನೆ ಕೂಡಾ ಮೂವರು ಉಗ್ರರನ್ನು ಹತ್ಯೆ ಮಾಡಲಾಗಿತ್ತು. ಗಡಿಯಲ್ಲಿ ಉಗ್ರ ಚಟುವಟಿಕೆಗಳು ಹೆಚ್ಚುತ್ತಿದ್ದು, ಭಾರತೀಯ ಸೇನೆ ಅದನ್ನು ಮಟ್ಟ ಹಾಕಲು ಹರಸಾಹಸಪಡುತ್ತಿದೆ. ದಾಳಿ ಮಾಡಲು ಸಂಚು ರೂಪಿಸುತ್ತಿದ್ದ ಉಗ್ರರಿಗೆ ಭದ್ರತಾ ಪಡೆಗಳು ದಿಟ್ಟ ಉತ್ತರ ನೀಡುತ್ತಿವೆ.

ಇನ್ನು ಗಡಿಯಲ್ಲಿ ಅನುಮಾನಾಸ್ಪದವಾಗಿ ಹಾರಾಡುತ್ತಿದ್ದ ಡ್ರೋನ್‌ ಒಂದನ್ನು ಭದ್ರತಾ ಪಡೆಗಳು ವಶಪಡಿಸಿಕೊಂಡಿವೆ. ಪಾಣಿಚಕ್‌ ಪ್ರದೇಶದಲ್ಲಿ ಈ ಡ್ರೋಣ್‌ ಹಾರಾಟ ನಡೆಸುತ್ತಿತ್ತು. ಡಿಜೆಐ ಕಂಪನಿಯ ಡ್ರೋಣ್‌ ಇದಾಗಿದ್ದು, ಗಡಿಯಾಚೆಯಿಂದ ಈ ಡ್ರೋನ್‌ ಬಂತಾ, ಸ್ಥಳೀಯರು ಹಾರಿಸಿದರಾ ಎಂಬುದರ ಬಗ್ಗೆ ತನಿಖೆ ನಡೆಯುತ್ತಿದೆ. ಪಾಣಿಚಕ್‌ ಪೊಲೀಸ್‌ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

Share Post