ವಿದ್ಯಾವಂತ ಪತ್ನಿ ಜೀವನಾಂಶಕ್ಕೆ ಹಕ್ಕುದಾರಳಲ್ಲ
ಮುಂಬೈ; ವಿದ್ಯಾವಂತ ಪತ್ನಿಯೂ ಜೀವನಾಂಶಕ್ಕೆ ಹಕ್ಕುದಾರಳು ಆಗಿರುವುದಿಲ್ಲ ಎಂದು ಮುಂಬೈ ನಗರದ ನ್ಯಾಯಾಲಯ ಮಹತ್ತರದ ತೀರ್ಪು ನೀಡಿದೆ. ಇಷ್ಟು ದಿನ ವಿಚ್ಚೇದನ ಆದರೆ ಮುಗೀತು ಪತಿಯಿಂದ ಪತ್ನಿಗೆ ಜೀವನಾಂಶ ಬರುತ್ತಿತ್ತು. ಆದರೆ ವಿದ್ಯಾವಂತ ಮತ್ತು ಆರ್ಥಿಕ ಸ್ಥಿತಿ ಉತ್ತಮವಾಗಿದ್ದರೆ, ಅಂತಹವರಿಗೆ ಪತಿಯಿಂದ ಯಾವುದೇ ಜೀವನಾಂಶ ದೊರೆಯುವುದಿಲ್ಲ ಎಂದು ನ್ಯಾಯಾಲಯ ವಿದ್ಯಾವಂತ ಮಹಿಳೆಯರಿಗೆ ಶಾಕ್ ನೀಡಿದೆ.
ವಾಣಿಜ್ಯ ನಗರಿ ಮುಂಬೈನಲ್ಲಿ ಮಹಿಳೆಯೊಬ್ಬರು ವಿಚ್ಚೇದನ ಪಡೆದು ಜೀವನಾಂಶವನ್ನು ಪಡೆಯಬೇಕೆಂದು ತನ್ನ ಗಂಡನ ವಿರುದ್ಧ ದಾಖಲಿಸಿದ ಕೌಟುಂಬಿಕ ಹಿಂಸಾಚಾರ ಪ್ರಕರಣದಲ್ಲಿ, ಪತ್ನಿಯೂ ದಂತವೈದ್ಯ ಆಗಿರುವುದರಿಂದ, ಇವರು ಪತಿಯಿಂದ ಜೀವನಾಂಶಕ್ಕೆ ಅರ್ಹರಾಗಿರುವುದಿಲ್ಲ ಎಂದು ಮುಂಬೈ ನಗರದ ನ್ಯಾಯಾಲಯ ಮಹತ್ತರ ತೀರ್ಪನ್ನು ಹೊರಡಿಸಿದೆ.
ಗಂಡನ ವಿರುದ್ಧ ಜೀವನಾಂಶ ಪಡೆಯಬೇಕೆಂದು ದೂರು ದಾಖಲಿಸಿದ ಮಹಿಳೆಯು ವೈದ್ಯೆ ಮತ್ತು ಮುಂಬೈನಂತಹ ಮಹಾನಗರದಲ್ಲಿ ವಾಸಿಸುತ್ತಿದ್ದಾರೆ ಎಂಬ ವಿಷಯ ನ್ಯಾಯಾಲಯಕ್ಕೆ ತಿಳಿದು ಬಂದಿದೆ. ಈ ಮಹಿಳೆಯು 2010-11ರಲ್ಲಿ ತನ್ನ ಬಿಡಿಎಸ್ ಪದವಿಯನ್ನು ಪೂರ್ಣಗೊಳಿಸಿದ್ದಾರೆ. ಇವರು ಮುಂದೆ ದಂತ ವೈದ್ಯರಾಗಿ ಕಾರ್ಯ ನಿರ್ವಹಿಸಬಹುದು. ಹಾಗೆಯೇ ಮುಂಬೈ ನಗರದಲ್ಲಿ ವಾಸ ಆಗಿರುವುದರಿಂದ ಇವರು ತಮ್ಮ ವೈದ್ಯ ವೃತ್ತಿಯಲ್ಲಿ ಕೆಲಸವನ್ನು ಸುಲಭವಾಗಿ ಪಡೆಯಬಹುದು ಎಂದು ನ್ಯಾಯಾಲಯವು ಅಭಿಪ್ರಾಯ ಪಟ್ಟಿದೆ.