Districts

ಹಾಸನ ಜಿಲ್ಲೆಯ ಹಲವೆಡೆ ನಡುಗಿದ ಭೂಮಿ; ರಿಕ್ಟರ್‌ ಮಾಪಕದಲ್ಲಿ 3.4 ತೀವ್ರತೆ ದಾಖಲು

ಬೆಂಗಳೂರು; ಅಪ್ಘಾನಿಸ್ತಾನದಲ್ಲಿ ಭೀಕರ ಭೂಕಂಪವಾಗಿರುವ ಹಿನ್ನೆಲೆಯಲ್ಲಿ ಭೂಮಿ ಸ್ವಲ್ಪ ನಡುಗಿದರೂ ಭೀತಿ ಉಂಟಾಗುತ್ತದೆ. ಇಂದು ಬೆಳಗಿನಜಾನ ಹಾಸನ ಜಿಲ್ಲೆಯ ಹಲವೆಡೆ ಭೂಮಿ ನಡುಗಿದ್ದು, ಜಯ ಭಯಭೀತರಾಗಿದ್ದಾರೆ.

ಇಂದು ಬೆಳಗಿನ ಜಾವ 4:30ರ ಸುಮಾರಿಗೆ 3.4 ತೀವ್ರತೆಯ ಕಂಪನವಾಗಿದೆ.  ಹೊಳೇನರಸಿಪುರ, ಅರಕಲಗೂಡು, ಹಾಸನ ತಾಲ್ಲೂಕಿನ ಹಲವು ಗ್ರಾಮಗಳಲ್ಲಿ ಭೂಮಿ ಕಂಪಿಸಿದೆ.  ಹೊಳೆನರಸೀಪುರ ತಾಲೂಕಿನ ಮಲುಗನಹಳ್ಳಿ ಗ್ರಾಮ ಕಂಪನದ ಕೇಂದ್ರಬಿಂದು ಎಂದು ಅಧಿಕಾರಿಗಳು ಹೇಳಿದ್ದಾರೆ.   0.800 ಕಿ.ಮೀ ಆಳದಲ್ಲಿ ಭೂಕಂಪ ಸಂಭವಿಸಿದೆ. ಮಧ್ಯಮ ಕ್ರಮಾಂಕ ಕಂಪನ ಇದಾಗಿದ್ದು ಕೇಂದ್ರ ಬಿಂದುವಿನ 40-50 ಕಿ.ಮೀ ವ್ಯಾಪ್ತಿಯ ಪ್ರದೇಶದಲ್ಲಿ ಕಂಪನದ ಅನುಭವವಾಗಿದೆ. ಕೊಡಗು ಜಿಲ್ಲೆಯ ಸೋಮವಾರ ಪೇಟೆ ಸುತ್ತಮುತ್ತಲೂ ಭೂಮಿ ನಡುಗಿದ ಅನುಭವವಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಈ ಭೂಕಂಪನದಿಂದ ಯಾವುದೇ ಹಾನಿಯಾಗುವುದಿಲ್ಲ. ಸೆಸ್ಮಿಕ್ ವಲಯ 2ರಲ್ಲಿ ಈ ಜಾಗ ಬರುವುದರಿಂದ ಹಾನಿಯ ಸಾಧ್ಯತೆ ಕಡಿಮೆ. ಜನತೆ ಭಯಪಡುವ ಅಗತ್ಯವಿಲ್ಲ ಎಂದು ಕೆಎಸ್‍ಎನ್‍ಡಿಎಂಸಿ ತಿಳಿಸಿದೆ.

Share Post