BengaluruCrimeUncategorized

ರೋಹಿಣಿ ಸಿಂಧೂರಿ ವಿರುದ್ದ ಡಿ.ರೂಪ ಮೌದ್ಗಿಲ್ ದೂರು

ಬೆಂಗಳೂರು: ಐಎಎಸ್ vs ಐಪಿಎಸ್ ಮಹಿಳಾ ಅಧಿಕಾರಿಗಳ ಸೋಶಿಯಲ್ ಮೀಡಿಯಾ ಕಾಳಗ ವಿಧಾನಸೌಧ ಮೆಟ್ಟಿಲೇರಿದೆ. ಐಪಿಎಸ್ ಅಧಿಕಾರಿ ಡಿ.ರೂಪ ಮೌದ್ಗಿಲ್ ಅವರು ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ದ ದೂರು ಸಲ್ಲಿಸಿದ್ದಾರೆ.

ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ದೂರು ನೀಡಿದ ಬೆ‌ನ್ನಲ್ಲೆ, ಐಪಿಎಸ್ ಅಧಿಕಾರಿ ರೂಪ ಕೂಡ ರೋಹಿಣಿ ಸಿಂಧೂರಿ ವಿರುದ್ದ ದೂರು ಸಲ್ಲಿಸಿದ್ದಾರೆ‌. ವಿಧಾನಸೌದಕ್ಕೆ ತೆರಳಿ ಸರ್ಕಾರದ ಮುಖ್ಯ ಕಾರ್ಯ ದರ್ಶಿ ವಂದಿತಾ ಶರ್ಮಾ ಅವರಿಗೆ ಮೂರು ಪುಟಗಳ ದಾಖಲೆ ಸಮೇತ ದೂರು ಸಲ್ಲಿಸಿದ್ದಾರೆ.

ಬಳಿಕ ಮಾತನಾಡಿರುವ ಡಿ ರೂಪ ಮೌದ್ಗಿಲ್ ರೋಹಿಣಿ‌ ನನ್ನ ಮೇಲೆ ದೂರು ನೀಡಿದ್ದಾರೆ, ಆದರೆ ಇದುವರೆಗೂ ಎಫ್ ಐ ಆರ್ ದಾಖಲಾಗಿಲ್ಲ ಎಂದರು. ರೋಹಿಣಿಯವರ ಮೇಲಿನ ಆರೋಪಗಳಿಗೆ ದಾಖಲೆ ತಂದಿದ್ದೆನೆ, ಅವರ ಮೇಲೆ ನನಗೆ ಯಾವುದೇ ವೈಯಕ್ತಿಕ ದ್ವೇಷ ವಿಲ್ಲ ಎಂದರು.

Share Post