30 ಸಾವಿರ ಅಡಿ ಎತ್ತರದಿಂದ ಏಕಾಏಕಿ 9 ಸಾವಿರ ಅಡಿಗೆ ಕುಸಿದ ವಿಮಾನ; ಪ್ರಯಾಣಿಕರ ಕಿವಿ, ಮೂಗಲ್ಲಿ ರಕ್ತಸ್ರಾವ!
ತಾಂತ್ರಿಕ ದೋಷದಿಂದ ವಿಮಾನವೊಂದು 30 ಸಾವಿರ ಅಡಿ ಎತ್ತರದಿಂದ ಬರೋಬ್ಬರಿ 9 ಸಾವಿರ ಅಡಿಗೆ ಕುಸಿದಿದೆ.. ಇದರ ನಡುವೆಯೂ ವಿಮಾನ ಪೈಲಟ್ ಸಮಯಪ್ರಜ್ಞೆ ಮೆರೆದು ವಿಮಾನವನ್ನು ವಾಪಸ್ ತಂದು ಲ್ಯಾಂಡ್ ಮಾಡಿದ್ದಾನೆ.. ಆದ್ರೆ, ವಿಮಾನದಲ್ಲಿದ್ದ ಪ್ರಯಾಣಿಕರು ತೀವ್ರ ಆತಂಕಗೊಂಡಿದ್ದು, ಅವರ ಮೂಗು ಹಾಗೂ ಕಿವಿಯಲ್ಲಿ ರಕ್ತ ಬಂದಿದೆ ಎಂದು ತಿಳಿದುಬಂದಿದೆ..
ತಾಂತ್ರಿಕ ದೋಷ ಕಾಣಿಸಿಕೊಳ್ಳುತ್ತಿದ್ದಂತೆ ಆಕ್ಸಿಜನ್ ಮಾಸ್ಕ್ ಹಾಕಿಕೊಳ್ಳಲು ಪ್ರಯಾಣೀಕರಿಗೆ ಸೂಚನೆ ನೀಡಲಾಗಿತ್ತು.. ಆದ್ರೂ ಕೂಡಾ ಪ್ರಯಾಣಿಕರ ಮೂಗು ಹಾಗೂ ಕಿವಿಗಳಿಂದ ರಕ್ತಸ್ರಾವವಾಗಿದೆ ಎಂದು ತಿಳಿದುಬಂದಿದೆ.. ಪೈಲಟ್ ಇಂಚೆನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದ್ದು, 13 ಪ್ರಯಾಣಿಕರನ್ನು ಆಸ್ಪತ್ರೆಗೆ ಸೇರಿಸಲಾಗಿದೆ..
ತೈವಾನ್‌ಗೆ ಹೊರಟಿದ್ದ ಕೊರಿಯನ್ ಏರ್ ವಿಮಾನದಲ್ಲಿ ಈ ಘಟನೆ ನಡೆದಿದೆ.. ಕೊರಿಯನ್ ಏರ್ ವಿಮಾನ ಕೆಇ-189 ಕ್ಯಾಬಿನ್ ಪ್ರೆಶರೈಸೇಷನ್ ಸಿಸ್ಟಮ್ನಲ್ಲಿ ಹಠಾತ್ ದೋಷ ಕಂಡು ಬಂದಿದ್ದರಿಂದ ಈ ಘಟನೆ ನಡೆದಿದೆ ಎಂದು ತಿಳಿದುಬಂದಿದೆ.