InternationalTechTechnology

ನಾಲ್ಕೇ ನಿಮಿಷದಲ್ಲಿ ಚಾರ್ಜ್‌ ಆಗುತ್ತೆ ಎಲೆಕ್ಟ್ರಿಕ್‌ ವಾಹನದ ಬ್ಯಾಟರಿ!; ಆಂಧ್ರ ವ್ಯಕ್ತಿಯ ಅದ್ಭುತ ಆವಿಷ್ಕಾರ!

ವಿದ್ಯುತ್‌ ಚಾಲಿತ ವಾಹನಗಳಿಗೆ ಇತ್ತೀಚೆಗೆ ಬೇಡಿಕೆ ಹೆಚ್ಚಾಗುತ್ತಿದೆ.. ಎಲ್ಲಾ ವಾಹನ ತಯಾರಿಕಾ ಕಂಪನಿಗಳು ಕೂಡಾ ವಿದ್ಯುತ್‌ ಚಾಲಿತ ವಾಹನಗಳನ್ನು ಮಾರುಕಟ್ಟೆಗೆ ತರುತ್ತಿವೆ.. ಆದ್ರೆ ಇದ್ರಲ್ಲಿ ಸಮಸ್ಯೆ ಏನು ಅಂದ್ರೆ, ಚಾರ್ಜಿಂಗ್‌.. ಬ್ಯಾಟರ್ಜಿ ಚಾರ್ಜ್‌ ಖಾಲಿಯಾದಾಗ ಏನು ಮಾಡುವುದು ಎಂಬ ಪ್ರಶ್ನೆ ಏಳುತ್ತದೆ.. ನಗರ ಪ್ರದೇಶದಲ್ಲಿ ಓಡಿಸೋದಕ್ಕೆ ಓಕೆ, ದೂರದ ಪ್ರದೇಶಗಳಿಗೆ ಹೋಗೋದು ಕಷ್ಟ ಅನ್ನೋ ಕಾರಣಕ್ಕೆ ಈಗಲೂ ಕೂಡಾ ಜನ ಎಲೆಕ್ಟ್ರಿಕ್‌ ಕಾರು, ಬೈಕ್‌ಗಳನ್ನು ಖರೀದಿ ಮಾಡುವುದಕ್ಕೆ ಹಿಂದೇಟು ಹಾಕುತ್ತಿದ್ದಾರೆ.. ಬ್ಯಾಟರಿ ಖಾಲಿಯಾದರೆ ಗಂಟೆಗಟ್ಟಲೆ ಚಾರ್ಜ್‌ ಮಾಡಿಕೊಂಡು ಎಲ್ಲಿ ಕೂರೋದು ಅನ್ನೋ ಸಮಸ್ಯೆಗೆ ಬ್ರಿಟನ್‌ನಲ್ಲಿರುವ ನೆಲೆಸಿರುವ ಆಂಧ್ರಪ್ರದೇಶದ ವ್ಯಕ್ತಿಯೊಬ್ಬರು ಪರಿಹಾರ ಕಂಡುಹಿಡಿದಿದ್ದಾರೆ..

ತೆಲುಗು ಮೂಲದ ಡಾ.ಸಾಯಿಶಿವಾರೆಡ್ಡಿ ಎಂದು ಬ್ರಿಟನ್‌ನಲ್ಲಿ ನಿಯೋಬೋಲ್ಟ್ ಎಂಬ ಸ್ಟಾರ್ಟ್‌ಅಪ್‌ ಕಂಪನಿ ಶುರು ಮಾಡಿದ್ದಾರೆ.. ಈ ಕಂಪನಿ ಮೂಲಕ ಒಂದು ಬ್ಯಾಟರಿ ಪರಿಚಯಿಸಲಾಗಿತ್ತು.. ಇದು ಕೇವಲ ನಾಲ್ಕು ನಿಮಿಷದಲ್ಲಿ ಶೇಕಡಾ 80 ರಷ್ಟು ಚಾರ್ಜ್‌ ಆಗಿದೆ..

ಈ ಎಲೆಕ್ಟ್ರಿಕ್ ಕಾರ್ ಬ್ಯಾಟರಿಯನ್ನು ಮೊದಲ ಪ್ರದರ್ಶನದಲ್ಲಿ ನಾಲ್ಕು ನಿಮಿಷ ಮತ್ತು 37 ಸೆಕೆಂಡುಗಳಲ್ಲಿ ಶೇಕಡಾ 80 ರಷ್ಟು ಯಶಸ್ವಿಯಾಗಿ ಚಾರ್ಜ್ ಮಾಡಲಾಯಿತು. ಬೆಡ್‌ಫೋರ್ಡ್‌ನಲ್ಲಿ ವಿಶೇಷವಾಗಿ ವಿನ್ಯಾಸಗೊಳಿಸಿದ ಕಾನ್ಸೆಪ್ಟ್ ಸ್ಪೋರ್ಟ್ಸ್ ಕಾರ್‌ನೊಂದಿಗೆ ಬ್ಯಾಟರಿಯನ್ನು ಪರೀಕ್ಷಿಸಲಾಯಿತು. ಪ್ರಸ್ತುತ ಟೆಸ್ಲಾ ಸೂಪರ್‌ಚಾರ್ಜರ್‌ನೊಂದಿಗೆ ಕಾರಿನ ಬ್ಯಾಟರಿಯನ್ನು ಶೇಕಡಾ 80 ರಷ್ಟು ಚಾರ್ಜ್ ಮಾಡಲು 15 ರಿಂದ 20 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ. ಆದ್ರೆ ಸಾಯಿಶಿವಾರೆಡ್ಡಿ ತಯಾರಿಸಿರುವ ಬ್ಯಾಟರಿ ಫುಲ್‌ ಚಾರ್ಜ್‌ ಆಗಲು ಆರು ನಿಮಿಷ ಸಾಕು.

ಆರು ನಿಮಿಷ ಚಾರ್ಜ್‌ ಮಾಡಿದರೆ ಬ್ಯಾಟರಿ ಫುಲ್‌ ಆಗಲಿದ್ದು, ಅದರಿಂದ 193 ಕಿಲೋ ಮೀಟರ್‌ ಪ್ರಯಾಣ ಮಾಡಬಹುದು ಎಂದು ಕಂಪನಿ ಹೇಳಿಕೊಂಡಿದೆ..  ನ್ಯೂಬೋಲ್ಟ್ ತನ್ನ ಸ್ವಂತ ವಾಹನಗಳನ್ನು ತಯಾರಿಸುವ ಯಾವುದೇ ಯೋಜನೆಯನ್ನು ಹೊಂದಿಲ್ಲ, ಆದರೆ ಅಸ್ತಿತ್ವದಲ್ಲಿರುವ ಕಾರ್ ಬ್ರಾಂಡ್‌ಗಳೊಂದಿಗೆ ಒಪ್ಪಂದ ಮಾಡಿಕೊಳ್ಳಲು ಯೋಜಿಸಿದೆ ಮತ್ತು ಒಂದು ವರ್ಷದೊಳಗೆ ಸಣ್ಣ ಪ್ರಮಾಣದಲ್ಲಿ EV ಗಳಲ್ಲಿ ಬ್ಯಾಟರಿಗಳನ್ನು ತಯಾರಿಸಲು ಯೋಜಿಸಿದೆ ಎಂದು ಶಿವಾರೆಡ್ಡಿ ಹೇಳಿಕೊಂಡಿದ್ದಾರೆ..

 

Share Post