Technology

ಆಪಲ್‌ – ಅಮೆರಿಕಾದ ಮೊದಲ 3ಟ್ರಿಲಿಯನ್‌ ಡಾಲರ್‌ ಕಂಪನಿ

ವಾಷಿಂಗ್ಟನ್‌ : ಅಮೆರಿಕದ ಮಾರುಕಟ್ಟೆಯಲ್ಲಿ 3 ಟ್ರಿಲಿಯನ್‌ ಮಾರುಲಕಟ್ಟೆ ಮೌಲ್ಯವನ್ನು ಹೊಂದಿರುವ ಮೊದಲ ಕಂಪನಿಯಾಗಿ ಆಪಲ್‌ ಹೊರಹೊಮ್ಮಿದೆ. ಆಪಲ್‌ ಕಂಪನಿಯ ಬೆಳವಣಿಗೆಯಲ್ಲಿ ಇದು ದೊಡ್ಡ ಮೈಲುಗಲ್ಲಾಗಿದೆ.

ಕೋವಿಡ್‌ ಸಾಂಕ್ರಾಮಿಕದ ನಡುವೆಯೂ 2020ರಲ್ಲಿ ಸಂಸ್ಥೆ 2 ಟ್ರಿಲಿಯನ್‌ ಡಾಲರ್ಸ್‌ ದಾಖಲೆ ಮಾಡಿತ್ತು. ಹೊಸದಾಗಿ ಆರಂಭಿಸಿದ್ದ ಸ್ಟ್ರೀಮಿಂಗ್‌ ಮತ್ತು ಸ್ಮಾರ್ಟ್‌ ಫೋನ್‌ ಆಪ್‌ನಿಂದಾಗಿ ಆಪಲ್‌ ಸಂಸ್ಥೆಯ ಮೌಲ್ಯ ಸಾಕಷ್ಟು ವೃದ್ಧಿಯಾಗಿತ್ತು.

2018ರ ಆಗಸ್ಟ್‌ನಲ್ಲಿ ಆಪಲ್‌ ಸಂಸ್ಥೆ 1 ಟ್ರಿಲಿಯನ್‌ ಡಾಲರ್ಸ್‌ ಮೌಲ್ಯ ಹೊಂದಿತ್ತು.

ಮೈಕ್ರೋಸಾಫ್ಟ್‌ ಹೊರತು ಪಡಿಸಿದರೆ ಬೇರಾವ ಕಂಪನಿಯೂ 2ಟ್ರಿಲಿಯನ್‌ ಡಾಲರ್ಸ್‌ ಮೌಲ್ಯವನ್ನು ಹೊಂದಿಲ್ಲ.

ಗೂಗಲ್‌ನಂತಹ ದೈತ್ಯ ಸರ್ಚ್‌ ಎಂಜಿನ್‌ ಸಂಸ್ಥೆ 1.92 ಟ್ರಿಲಿಯನ್‌ ಡಾಲರ್ಸ್‌ ಮೌಲ್ಯ ಹೊಂದಿದೆ.

Share Post