Politics

ಬೆಂಗಳೂರಿನಲ್ಲಿ ಓದಿದ್ದ ಈಕೆ ಆ ರಾಜ್ಯದ ಮೊದಲ ಮುಸ್ಲಿಂ ಶಾಸಕಿ!

ಲೋಕಸಭಾ ಚುನಾವಣೆ ಜೊತೆ ಜೊತೆಗೆ ಒಡಿಶಾ, ಆಂಧ್ರಪ್ರದೇಶ ಸೇರಿ ಹಲವು ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆ ಕೂಡಾ ನಡೆದಿತ್ತು.. ಇದರಲ್ಲಿ ಒಡಿಶಾದಲ್ಲಿ ಇದೇ ಮೊದಲ ಬಾರಿಗೆ ಮುಸ್ಲಿಂ ಮಹಿಳೆಯೊಬ್ಬರು ವಿಧಾನಸಭೆ ಪ್ರವೇಶಿಸುತ್ತಿದ್ದಾರೆ.. ಬೆಂಗಳೂರಿನ ಐಐಎಂಬಿಯಲ್ಲಿ ವ್ಯಾಸಂಗ ಮಾಡಿದ್ದ ಸೋಫಿಯಾ ಫಿರ್ದೌಸ್ ಕಾಂಗ್ರೆಸ್‌ ಪಕ್ಷದಿಂದ ಶಾಸಕಿಯಾಗಿ ಆಯ್ಕೆಯಾಗಿದ್ದು, ವಿಧಾನಸಭೆ ಪ್ರವೇಶ ಮಾಡುತ್ತಿದ್ದಾರೆ.. ಇವರು ಈ ಬಾರಿ ಒಡಿಶಾದಲ್ಲಿ ಕಾಂಗ್ರೆಸ್‌ನಿಂದ ಆಯ್ಕೆಯಾದ ಏಕೈಕ ಶಾಸಕಿಯಾಗಿದ್ದಾರೆ..

ಸೋಫಿಯಾ ಫಿರ್ದೌಸ್ ಗೆ ಈಗ 32 ವರ್ಷ. ಇವರು ಮೊದಲಿಗೆ ಕಳಿಂಗ ಯುನಿರ್ವಸಿಟಿಯಲ್ಲಿ ಸಿವಿಲ್ ಇಂಜಿನಿಯರಿಂಗ್ ಮಾಡಿದ್ದಾರೆ.. ಅನಂತರ ಅವರು 2022ರಲ್ಲಿ ಬೆಂಗಳೂರಿನ ಐಐಎಂಬಿಯಲ್ಲಿ ಜನರಲ್ ಮ್ಯಾನೆಜ್​​ಮೆಂಟ್ ಪ್ರೋಗ್ರಾಮ್ ಮುಗಿಸಿದ್ದರು.. ಇದಾದ ಮೇಲೆ ಅವರು ಭುವನೇಶ್ವರ್​​ದ ರಿಯಲ್ ಎಸ್ಟೇಟ್​​ ಅಸೋಸಿಯೇಷನ್​ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತದ್ದರು..

ಸೋಫಿಯಾ ಅವರ ತಂದೆ ಹಿರಿಯ ಕಾಂಗ್ರೆಸ್‌ ನಾಯಕರಾಗಿದ್ದಾರೆ.. ಈ ಬಾರಿ ಕಾಂಗ್ರೆಸ್‌ ಹೈಕಮಾಂಡ್‌ ಸೋಫಿಯಾ ತಂದೆಗೆ ಟಿಕೆಟ್‌ ನಿರಾಕರಿಸಿತ್ತು.. ಹೀಗಾಗಿ ಅವರು ತಮ್ಮ ಮಗಳನ್ನು ಅಖಾಡಕ್ಕಿಳಿಸಿದ್ದರು.. ಬಾರಾಬತಿ-ಕಟಕ್ ವಿಧಾನಸಭಾ ಕ್ಷೇತ್ರದಿಂದ ಅವರು ಶಾಸಕಿಯಾಗಿ ಆಯ್ಕೆಯಾಗಿದ್ದಾರೆ..

 

Share Post