Sports

ರಶೀದ್ ಖಾನ್‌‌ ಬೇಡಿಕೆಗೆ ಹೈದರಾಬಾದ್‌ ಫ್ರಾಂಚೈಸ್ ಶಾಕ್‌ ಆಗಿದ್ದಾರೆ.

ಹೈದರಾಬಾದ್: 15ನೇ ಆವೃತ್ತಿ ಐಪಿಎಲ್ ಈಗಿಂದಲೇ ರಂಗೇರಿದೆ. ಫ್ರಾಂಚೈಸ್‍ಗಳು ಆಟಗಾರರ ಮೆಗಾ ಹರಾಜಿಗೂ ಮುನ್ನ 4 ಆಟಗಾರರನ್ನು ರಿಟೈನ್ ಮಾಡಿಕೊಳ್ಳುವ ಸವಾಲಿನಲ್ಲಿದೆ. ಈ ನಡುವೆ ಸನ್ ರೈಸರ್ಸ್ ಹೈದರಾಬಾದ್ ತಂಡ ಮಿಸ್ಟ್ರಿ ಸ್ಪಿನ್ನರ್ ರಶೀದ್ ಖಾನ್‍ರನ್ನು ರಿಟೈನ್ ಮಾಡಿಕೊಳ್ಳಲು ಇಚ್ಚಿಸಿದೆ. ಆದರೆ ರಶೀದ್ ಖಾನ್ ಮಾತ್ರ ಹೈದರಾಬಾದ್ ಫ್ರಾಂಚೈಸ್‍ನೊಂದಿಗೆ ದೊಡ್ಡ ಬೇಡಿಕೆಯೊಂದನ್ನು ಇಟ್ಟಿದ್ದಾರೆ.

ಮೂಲಗಳ ಪ್ರಕಾರ ಸನ್ ರೈಸರ್ಸ್ ಹೈದರಾಬಾದ್ ತಂಡ ಕೇನ್ ವಿಲಿಯಮ್ಸನ್ ಮತ್ತು ರಶೀದ್ ಖಾನ್‍ರನ್ನು ರಿಟೈನ್ ಮಾಡಿಕೊಳ್ಳಲು ಯೋಚಿಸಿದೆ. ಆದರೆ ಈ ಬಗ್ಗೆ ರಶೀದ್ ಖಾನ್ ನನ್ನನ್ನು ರಿಟೈನ್ ಮಾಡಿಕೊಳ್ಳುವುದಾದರೆ ಮೊದಲ ಆಯ್ಕೆಯ ರಿಟೆನ್ಶನ್ ಆಗಿ ಉಳಿಸಿಕೊಳ್ಳಬೇಕೆಂದು ತಿಳಿಸಿರುವುದಾಗಿ ವರದಿಯಾಗಿದೆ. ಆದರೆ ಫ್ರಾಂಚೈಸ್ ಕೇನ್ ವಿಲಿಯಮ್ಸನ್ ಅವರನ್ನು ಮೊದಲ ರಿಟೆನ್ಶನ್ ಆಗಿ ಉಳಿಸಿಕೊಳ್ಳಲು ಬಯಸಿದೆ. ಹಾಗಾಗಿ ರಶೀದ್ ಖಾನ್ ಬೇಡಿಕೆ ಹೈದರಾಬಾದ್ ಪಾಲಿಗೆ ಮುಳ್ಳಾಗಿದೆ

Share Post